ಹಾಸಿಗೆಯಲ್ಲಿ ಮೈಯೊಡ್ಡಿ ಮಾತನಾಡುತ್ತಾ ಕಾಲ ಕಳೆಯುವುದು ಒಳ್ಳೆಯದೂಂತ ಅನಿಸಬಹುದು. ಆದರೆ ನಿದ್ದೆ ಹೋಗುವ ಮುನ್ನ ಮೊಬೈಲ್ನಲ್ಲಿ ಮಾತನಾಡುವುದಿದೆಯಲ್ಲ... ಅದು ಡೇಂಜರ್!ನಿದ್ರಿಸುವ ಮುನ್ನ ಮೊಬೈಲ್ನಲ್ಲಿ ಚಾಟಿಂಗ್ ಮಾಡುತ್ತಾ ಇದ್ದರೆ, ಹ್ಯಾಂಡ್ಸೆಟ್ನಿಂದ ಹೊರಸೂಸುವ ವಿಕಿರಣಗಳು ನಿದ್ರಾಹೀನತೆ ಮತ್ತು ತಲೆನೋವು ತಂದೊಡ್ಡಬಲ್ಲವು ಹಾಗೂ ಗಟ್ಟಿನಿದ್ರೆಯ ಅವಧಿಯನ್ನೂ ಕಡಿತಗೊಳಿಸಬಲ್ಲುದಂತೆ.ಹೀಗಂತ ಅಧ್ಯಯನವೊಂದು ಹೇಳುತ್ತದೆ.ನಿದ್ದೆ ಕಡಿಮೆಯಾಯಿತೆಂದರೆ ಇದ್ದೇ ಇದೆಯಲ್ಲ, ಖಿನ್ನತೆ, ಏಕಾಗ್ರತೆಯ ಕೊರತೆ, ಮತ್ತು ವ್ಯಕ್ತಿತ್ವದ ಬದಲಾವಣೆಗಳು... ನಿದ್ರಾ ಹೀನತೆಯು ಗಮನ ಕೊಡುವುದಕ್ಕೂ ಅಡ್ಡಿಯಾಗಬಹುದು ಮತ್ತು ಮಕ್ಕಳಲ್ಲಿ, ಯುವಕರಲ್ಲಿ