ಕೋಪವೆಂಬುದು ಕೇಳು ಪಾಪದ ನೆಲೆಗಟ್ಟು, ಕೂಪದೊಳು ನೇಣು ಹರಿದಂಗೆ ಕೋಪಿ ತಾನೆಳೆವ ಸರ್ವಜ್ಞ ಎಂಬ ಸರ್ವಜ್ಞ ವಚನವನ್ನು ಕೇಳಿರಬಹುದು. ಕೋಪದಿಂದ ಅನರ್ಥವೇ ಹೆಚ್ಚು ಎನ್ನುವುದು ಈ ವಚನದಿಂದ ವೇದ್ಯವಾಗುತ್ತದೆ. ಕೋಪದಿಂದ ದೇಹದ ಆರೋಗ್ಯದ ಮೇಲೆ ಕೂಡ ದುಷ್ಪರಿಣಾಮ ಉಂಟಾಗುತ್ತದೆನ್ನುವುದು ದೃಢಪಟ್ಟಿದೆ. ಕೋಪದ ಬಹಿರಂಗ ರೂಪವು ಕೆಲವು ನಿಮಿಷಗಳ ಕಾಲದ ಅನುಭವವಾಗಿರುತ್ತದೆ. ಆದರೆ ಅವ್ಯಕ್ತ ರೂಪಗಳಾದ ಅಸಹನೆ, ಅತೃಪ್ತಿ, ಸಿಡುಕುತನ ಮುಂತಾದವು ಅನೇಕ ಗಂಟೆಗಳವರೆಗೆ ಅಥವಾ ಅನೇಕ ದಿನಗಳು ಮುಂದುವರಿಯುತ್ತವೆ. ಸತತ,