PTI ತಮ್ಮ ಸೌಂದರ್ಯದ ಬಗ್ಗೆ ಕಾಳಜಿಯಿರುವ ಮಹಿಳೆಯರು ಇನ್ನು ಮುಂದೆ ಮೊಡವೆಗಳೊಂದಿಗೆ ಬದುಕುವುದನ್ನು ಕಲಿಯಬೇಕು, ಕೊನೆ ಪಕ್ಷ ಗರ್ಭಧರಿಸಿರುವಾಗಲಾದರೂ ಇದರೊಂದಿಗೆ ರಾಜಿ ಮಾಡಿಕೊಳ್ಳುವುದು ಒಳಿತು. ಯಾಕೆಂದರೆ, ತಜ್ಞರು ಹೇಳುವಂತೆ ಮೊಡವೆ ನಿರೋಧಕ ಕ್ರೀಮ್ಗಳ ಬಳಕೆ ಗರ್ಭಪಾತಕ್ಕೆ ದಾರಿಯಾದೀತು.ಮಿಲಿಯಗಟ್ಟಲೆ ಮಹಿಳೆಯರು, ಅದರಲ್ಲೂ ವಿಶೇಷವಾಗಿ ಗರ್ಭಿಣಿಯರು ಎದುರಿಸುವ ಸಾಮಾನ್ಯ ಸಮಸ್ಯೆ ಮೊಡವೆ. ಆದರೆ ಮೊಡವೆ ನಿರೋಧಕ ಕ್ರೀಮ್ಗಳನ್ನು ಗರ್ಭಧರಿಸುವುದಕ್ಕಿಂತ ಒಂದು ತಿಂಗಳು ಮೊದಲು ಬಳಸಿದರೂ ಇದು ಅಸಹಜ ಮಗುವಿನ ಜನನಕ್ಕೆ ಕಾರಣವಾಗುವ ಸಾಧ್ಯತೆ