ಮುಖ್ಯ ಪುಟ > ವಿವಿಧ > ಆರೋಗ್ಯ > ಲೇಖನಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಡೋಮ್ ಬೇಡ, ಲಸಿಕೆ ಸಾಕು  Search similar articles
ಇನ್ನು ಮುಂದೆ ಗಂಡಸರಿಗೆ ಕಾಂಡೋಮ್ ಕಿರಿಕಿರಿ ಇಲ್ಲ. ಮೂರು ತಿಂಗಳಿಗೊಂದು ಲಸಿಕೆ ಹಾಕಿಸಿಕೊಂಡರೆ ಸಾಕು. ಅವರ ಲೈಂಗಿಕ ಸಂಗಾತಿಗಳು ಗರ್ಭಧರಿಸುವ ಸಾಧ್ಯತೆ ಇಲ್ಲ - ಇಂತಹ ಒಂದು ಲಸಿಕೆಗಾಗಿ ಮುಂಬೈ ವಿಜ್ಞಾನಿಗಳು ತೀವ್ರ ಸಂಶೋಧನೆ ನಡೆಸುತ್ತಿದ್ದಾರೆ.

ಅದು ಗರ್ಭ ನಿರೋಧಕ ಗುಳಿಗೆ ಅಥವಾ ಟ್ಯುಬೆಕ್ಟಮಿ ಶಸ್ತ್ರಕ್ರಿಯೆಯಾಗಿರಲಿ ಮಹಿಳೆಯರಿಗೆ ಎಂದಿಗೂ ಕಿರಿಕಿರಿಯ ವಿಚಾರ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಲಸಿಕೆ ಹಾಕಿಸಿಕೊಂಡರೆ ಅದು ಅವರ ಸಂಗಾತಿಗಳ ಬೇಡದ ಗರ್ಭವನ್ನು ತಡೆಯುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯ.

"ಇದು 80 ಕಿಲೋ ಡಾಲ್ಟನ್ ಹ್ಯೂಮನ್ ಸ್ಪರ್ಮ್ ಆಂಟಿಜೆನ್ ಅಥವಾ 80ಕೆಡಿಎಚ್ಎಸ್ಎ ಎಂಬ ಹೆಸರಿನ ಪ್ರೊಟೀನ್ ತಾತ್ಕಾಲಿಕವಾಗಿ ಫಲವತ್ತತೆಯನ್ನು ಇಲ್ಲವಾಗಿಸುತ್ತದೆ" ಎಂದು ವಿಜ್ಞಾನಿ ಡಾ| ಎ.ಬಂಡಿವ್ಡೇಕಾರ್ ಹೇಳಿದ್ದಾರೆ.

ಇದೀಗ ಪುರುಷರಿಗಾಗಿ ಇರುವ ಗರ್ಭನಿರೋಧಕಗಳು ಹಲವಾರು ಕುಂದುಕೊರತೆಗಳನ್ನು ಹೊಂದಿವೆ. ಕಾಂಡೋಮ್‌ಗಳನ್ನು ನೂರು ಪ್ರತಿಶತಃ ನಂಬುವಂತಿಲ್ಲ ಮತ್ತು ವ್ಯಾಸೆಕ್ಟಮಿ ಶಸ್ತ್ರಕ್ರಿಯೆ ಮಾಡಿಸಿಕೊಂಡರೆ ಮತ್ತೆ ಮಕ್ಕಳಾಗುವಂತೆಯೇ ಇಲ್ಲ.

ಮಾನವ ವೀರ್ಯಾಣುವಿನಿಂದ ಪ್ರತ್ಯೇಕಗೊಳಿಸಿರುವ ಕಣದಿಂದ ಹೊಸ ಲಸಿಕೆ ತಯಾರಿಸಿದ್ದು, ಇದು ತಾತ್ಕಾಲಿಕ ಷಂಡತನವನ್ನು ಮೂಡಿಸುತ್ತದೆ. ಮಕ್ಕಳು ಬೇಕೆಂದಾಗ ಮಕ್ಕಳನ್ನು ಹಡೆಯಬಹುದಾಗಿದ್ದು ಇದು ತುಂಬ ಸರಳ ಹಾಗೂ ಪರಿಣಾಮಕಾರಿ ಎಂದು ವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ.

ಈ ಲಸಿಕೆಯನ್ನು ಇದೀಗಾಗಲೆ, ಇಲಿಗಳು ಮತ್ತು ಚಿಕ್ಕ ಮಂಗಗಳ ಮೇಲೆ ಪ್ರಯೋಗಿಸಲಾಗಿದೆ. ಪ್ರಸ್ತುತ ದೊಡ್ಡ ಮಂಗಗಳ ಮೇಲೆ ಪ್ರಯೋಗಿಸಲಾಗುತ್ತಿದ್ದು, ಮಾನವರು ಇದನ್ನು ಪ್ರಯತ್ನಿಸಲು ಇನ್ನೂ ಕನಿಷ್ಠ ಎರಡು ವರ್ಷಗಳು ಬೇಕು ಎಂದು ಬಂಡಿವ್ಡೇಕಾರ್ ಹೇಳಿದ್ದಾರೆ.
ಇದರ ಬಳಕೆ ಅತಿ ಸುಲಭ ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದ ಕಾರಣ ಹೆಚ್ಚಿನ ಪುರುಷರು ಈ ಲಸಿಕೆಯ ಆಯ್ಕೆಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಆದರೆ, ಇದು ಗರ್ಭನಿರೋಧವಾದರೂ ಕೂಡ, ಎಚ್ಐವಿ ಮತ್ತು ಇತರ ಲೈಂಗಿಕ ಖಾಯಿಲೆಗಳನ್ನು ತಡೆಯುವಲ್ಲಿ ಪರಿಣಾಮ ಬೀರದು ಎಂಬುದು ಈ ಲಸಿಕೆಯ ಕುರಿತು ವ್ಯಕ್ತವಾಗಿರುವ ಟೀಕೆ.
ಮತ್ತಷ್ಟು
ಮೊಡವೆಗಳ ಕ್ರೀಮ್ ಮಾರಕವಂತೆ!
ಕರುಳು ಕ್ಯಾನ್ಸರ್ ಲಸಿಕೆ ಸಾಧ್ಯ
'ಕಾಲ್‌ಸೆಂಟರ್ ರೋಮಿಯೋ'ಗಳಿಗೆ ಏಡ್ಸ್ ತಜ್ಞರ ಎಚ್ಚರಿಕೆ!
ತೂಕ ಇಳಿಸಬೇಕೇ? ಭರ್ಜರಿ ಬ್ರೇಕ್‌ಫಾಸ್ಟ್ ಸೇವಿಸಿ!
ಭಾವಾತ್ಮಕ ಹಿಂಸಾಚಾರಕ್ಕೆ ಕಾರಣವಾಗುವ ಮದ್ಯಪಾನ
ಗರ್ಭಿಣಿಯರೇ ಜೋಕೆ! ಮೊಬೈಲ್ ಬಳಕೆ ಉಚಿತವಲ್ಲವಂತೆ!