ಭಾರತದ ಐವರು ದಂಪತಿಗಳಲ್ಲಿ ಒಂದು ಜೋಡಿಯು ಬಂಜೆತನದ ಸಮಸ್ಯೆಯನ್ನು ಅನುಭವಿಸುತ್ತಿದ್ದು, ಫಲವತ್ತತೆ ರಹಿತತೆಯು 300 ಕೋಟಿ ಡಾಲರ್ಗಳ ಉದ್ದಿಮೆಗೆ ಹಾದಿಯೊದಗಿಸಿದೆ.ಕೃತಕ ರೀತಿಯಲ್ಲಿ ಮಗು ಹಡೆಯುವ ವಿಧಾನದತ್ತ ಬಂಜೆ ದಂಪತಿಗಳು ಆಕರ್ಷಿತರಾಗುತ್ತಿದ್ದು, ಇದೀಗ, ಜಾಣ, ಬುದ್ಧಿವಂತ ಮಕ್ಕಳನ್ನು ಪಡೆಯಲು ಇಂತಹ ವೀರ್ಯಗಳ ಖರೀದಿಯ ಭರಾಟೆ ಜೋರಾಗಿದೆಯಂತೆ!ಜೀನ್ ಶಾಪಿಂಗ್ ಎಂಬ ಪರಿಕಲ್ಪನೆ ಹುಟ್ಟಿಕೊಂಡಿದ್ದು, ಇದು ಕೋಟ್ಯಂತರ ರೂಪಾಯಿಯ ವಹಿವಾಟಿಗೆ ಕಾರಣವಾಗಿದೆ. ಧಾತು ದಾನಿಯು ಉತ್ತಮ ವ್ಯಕ್ತಿತ್ವ, ಬುದ್ಧಿಶಕ್ತಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಆರೋಗ್ಯವಂತ