ಕಡುಕಿ ಮಹಿಳೆಯರೇ ಇತ್ತ ಕೇಳಿ. ಮೊತ್ತ ಮೊದಲಿಗೆ ಹೇಳುವುದಾದರೆ ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ತಿಳಿದೂ ಕುಡಿತದ ಚಟಕ್ಕೆ ನೀವು ಬಿದ್ದಿದ್ದರೆ, ಕನಿಷ್ಠಪಕ್ಷ ಗರ್ಭಧರಿಸಿದ್ದಾಗಲಾದರೂ ನಿಮ್ಮ ಚಟಕ್ಕೆ ಟಾಟಾ ಹೇಳಲೇ ಬೇಕು. ಇಲ್ಲವೆಂದಾದರೆ ಇದು ಭವಿಷ್ಯದಲ್ಲಿ ನಿಮ್ಮ ತಾಯಿ-ಮಗು ನಡುವಿನ ಅನುಬಂಧಕ್ಕೇ ಕುತ್ತುಂಟುಮಾಡುತ್ತದೆ ಎಂಬುದಾಗಿ ಹೊಸ ಅಧ್ಯಯನ ಒಂದು ಹೇಳುತ್ತದೆ.ಅಬರ್ದೀನ್ ರಾಬರ್ಟ್ ಗಾರ್ಡನ್ ವಿಶ್ವವಿದ್ಯಾನಿಲಯದ ಸಂಶೋಧಕರು 130 ಚೊಚ್ಚಲ ಬಸುರಿಯರನ್ನು ತಮ್ಮ ಅಧ್ಯಯನಕ್ಕೆ ಬಳಸಿಕೊಂಡಿದ್ದು, ಅವರ ಮದ್ಯಪಾನ ಸೇವನೆಯ ಹವ್ಯಾಸವನ್ನು