ಮೆದುಳಿನ ರಕ್ತಸ್ರಾವದಿಂದ ಉಂಟಾಗುತ್ತಿರುವ ಆಘಾತಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಕಳೆದೊಂದು ದಶಕದಿಂದ ಈ ಸಂಖ್ಯೆಯಲ್ಲಿ ಸುಮಾರು ಶೇ.20ರಷ್ಟು ಹೆಚ್ಚಳವಾಗಿದ್ದು ಜನರ ಜೀವಿತಾವಧಿಯ ಹೆಚ್ಚಳ ಇದಕ್ಕೆ ಕಾರಣ ಇರಬಹುದು ಎಂಬುದಾಗಿ ಅವರು ಅಭಿಪ್ರಾಯಿಸಿದ್ದಾರೆ.ಲಾನ್ಸೆಟ್ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಈ ಅಧ್ಯಯನ ವರದಿಯು, ಕಳೆದ 10 ವರ್ಷದ ಅವಧಿಯಲ್ಲಿ ಹೆಚ್ಚೆಚ್ಚು ಪುರುಷ ಹಾಗೂ ಮಹಿಳೆಯರು ಈ ವಿಧದ ಆಘಾತಗಳಿಂದ ಬಳಲುತ್ತಿದ್ದರೂ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ, ಇದಕ್ಕೆ ಆರೋಗ್ಯದ ಕುರಿತ ಕಾಳಜಿಯಲ್ಲಿ