ಸಂಸ್ಕೃತದಲ್ಲಿ ಆಮಲಕ್ಕಿ, ಧಾತ್ರಿಫಲ, ವಾಯಸ್ಥ ಎಂಬಿತ್ಯಾದಿ ಹೆಸರಿನಿಂದ ಪ್ರಸಿದ್ಧವಾಗಿರುವ ನೆಲ್ಲಿಕಾಯಿಯು ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಅತಿ ಹೆಚ್ಚಾಗಿ ಬಳಸಲಾಗುತ್ತದೆ. ಆರೋಗ್ಯವರ್ಧಕ, ಶಕ್ತಿವರ್ಧಕ ಔಷಧಿಯಾಗಿ ಪ್ರಸಿದ್ಧವಾಗಿರುವ ಸಸ್ಯ ಗುಂಪಿಗೆ ಸೇರಿದ ನೆಲ್ಲಿಕಾಯಿ ರಾಸಾಯನ ಆಯುರ್ವೇದ ಪದ್ಧತಿಯಲ್ಲಿ ಮಾನ್ಯತೆ ಪಡೆದಿದೆ.ರಸಾಯನ ಎಂಬುದು ಆಯುರ್ವೇದೀಯ ಸಸ್ಯಾಂಶಗಳ ಮಿಶ್ರಣವಾಗಿದ್ದು, ಇದು ಆಯಸ್ಸು ವರ್ಧನೆಯಲ್ಲಿ ಮತ್ತು ಶಕ್ತಿವರ್ಧನೆಯಲ್ಲಿ ಅತ್ಯಂತ ಪ್ರಭಾವಿಯಾಗಿ ಕೆಲಸ ಮಾಡುತ್ತದೆ. ಆಯುರ್ವೇದದ ಅತಿ ಮುಖ್ಯ ಪಠ್ಯಗಳಲ್ಲೊಂದಾದ ಚರಕ ಸಂಹಿತೆಯಲ್ಲಿ ಈ ರಸಾಯನವನ್ನು ರೋಗ ನಿರೋಧಕ