ಸಮಸ್ಯೆ ಒಂದನ್ನು ಎದುರಿಸುತ್ತಿದ್ದೀರಾ? ದುಗುಡಗೊಳ್ಳಬೇಡಿ, ಸುಮ್ನೆ ಒಂದು ಕೋಳಿ ನಿದ್ದೆ ಮಾಡಿ, ನಿಮಗೆ ಸಮಸ್ಯೆಯನ್ನು ಎದುರಿಸುವ ಶಕ್ತಿ ಬರುತ್ತದೆ ಎಂಬುದಾಗಿ ಸಂಶೋಧಕರು ಹೇಳುತ್ತಾರೆ.ಸಮಸ್ಯೆ ಒಂದು ಕಾಡಿದಾಗ ಅದರ ಮೇಲೆ ನಿದ್ರಿಸುವುದು ಮತ್ತು ಅದರ ಕುರಿತು ಕನಸು ಕಾಣುವುದೂ ಸಹ ಸಮಸ್ಯೆಯ ನಿವಾರಣೆಗೆ ಸಹಾಯ ಮಾಡುವುದಂತೆ! ಒಂದು ಸಣ್ಣನಿದ್ದೆಯು ವ್ಯಕ್ತಿಯ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂಬುದಾಗಿ ಡೇಲಿ ಟೆಲಿಗ್ರಾಫ್ ವರದಿ ಮಾಡಿದೆ.ಒಂದು ಕಿರುನಿದ್ದೆಯ ಬಳಿಕ ವ್ಯಕ್ತಿಗಳು ಹೆಚ್ಚು ಕ್ಷಿಪ್ರವಾಗಿ ಮತ್ತು ಹೆಚ್ಚು ಸಮರ್ಥವಾಗಿ