ಮುಖ್ಯ ಪುಟ > ವಿವಿಧ > ಆರೋಗ್ಯ > ಲೇಖನಗಳು > ಬೆನ್ನುನೋವು ಕಾಡಿದರೆ ಹೆಚ್ಚುವ್ಯಾಯಾಮ ಮಾಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆನ್ನುನೋವು ಕಾಡಿದರೆ ಹೆಚ್ಚುವ್ಯಾಯಾಮ ಮಾಡಿ
ಬಹಳಕಾಲದಿಂದ ಬೆನ್ನುನೋವು ಕಾಡುತ್ತಿದ್ದರೆ, ಹೆಚ್ಚು ವ್ಯಾಯಾಮ ಮಾಡಿ. ಇದರಿಂದ ಬೆನ್ನುನೋವಿಗೆ ಮುಕ್ತಿ ಲಭಿಸುವುದು ಎಂಬುದಾಗಿ ಹೊಸ ಅಧ್ಯಯನ ಒಂದು ತಿಳಿಸಿದೆ.

ಈ ಅಧ್ಯಯನಕ್ಕಾಗಿ ಬಹಳ ಕಾಲದಿಂದ ಬೆನ್ನುನೋವಿನಿಂದ ಬಳಲುತ್ತಿದ್ದ 240 ಪುರುಷರು ಮತ್ತು ಮಹಿಳೆಯರನ್ನು ಬಳಸಿಕೊಳ್ಳಲಾಗಿದ್ದು, ವಾರದಲ್ಲಿ ನಾಲ್ಕು ದಿನಗಳ ವ್ಯಾಯಾಮ ಮಾಡುವವರು ಇತರರಿಗಿಂತ ಶೇ.28ರಷ್ಟು ಕಡಿಮೆ ನೋವು ಹಾಗೂ ಶೇ.36ರಷ್ಟು ಕಡಿಮೆ ಅಸಾಮರ್ಥ್ಯವನ್ನು ಹೊಂದಿದ್ದರು.

ಅಲ್ಬರ್ಟ ವಿಶ್ವವಿದ್ಯಾನಿಲಯದ ಶರೀರ ವಿಜ್ಞಾನ ವ್ಯಾಯಾಮ ವಿಭಾಗದ ಪ್ರೊಫೆಸರ್ ರಾಬರ್ಟ್ ಕೆಲ್ ಅವರ ನೇತೃತ್ವದಲ್ಲಿ ಈ ಅಧ್ಯಯನ ನಡೆಸಲಾಗಿದೆ. ವಾರದಲ್ಲಿ ಎರಡು ಅಥವಾ ಮೂರು ದಿನ ಮಾತ್ರ ವ್ಯಾಯಾಮಶಾಲೆಗೆ ಭೇಟಿ ನೀಡುವವರಲ್ಲಿ ನೋವಿನ ಮಟ್ಟ ಹೆಚ್ಚು ಇತ್ತು ಎಂಬುದನ್ನು ಅಧ್ಯಯನ ಕಂಡುಕೊಂಡಿದೆ.

ಈ ಅಧ್ಯಯನವು ಬೆನ್ನುನೋವು ಇರುವವರು ವ್ಯಾಯಾಮ ಮಾಡಬಾರದು ಎಂಬ ನಂಬುಗೆಗೆ ವ್ಯತಿರಿಕ್ತ ಫಲಿತಾಂಶ ನೀಡಿದೆ. ವಾರಕ್ಕೆ ನಾಲ್ಕು ಬಾರಿ ವ್ಯಾಯಾಮಶಾಲೆಯಲ್ಲಿ ಭಾರಎತ್ತುವುದು ಮುಂತಾದ ವ್ಯಾಯಾಮ ಮಾಡುವುದು ದೊಡ್ಡಮಟ್ಟದಲ್ಲಿ ನೋವು ಶಮನ ಮಾಡುತ್ತದೆ ಎಂಬುದಾಗಿ ಕೆಲ್ ಹೇಳಿದ್ದಾರೆ.

ಕೆಳಭಾಗದ ಬೆನ್ನುನೋವಿನಿಂದ ಬಳಲುತ್ತಿದ್ದ 60 ಪುರಷರು ಮತ್ತು ಮಹಿಳೆಯರ ಗುಂಪೊಂದು ವಾರದಲ್ಲಿ ಎರಡು, ಮೂರು ಅಥವಾ ನಾಲ್ಕುದಿನಗಳ ಕಾಲ ಭಾರಎತ್ತುವ ವ್ಯಾಯಾಮ ಮಾಡಿತ್ತು. ಕೆಲವರು ವ್ಯಾಯಾಮ ಮಾಡುತ್ತಲೇ ಇರಲಿಲ್ಲ.

16 ವಾರಗಳ ವೀಕ್ಷಣೆಬಳಿಕ ಅವರ ಪ್ರಗತಿಯನ್ನು ಅಳೆಯಲಾಗಿತ್ತು. ಇವರಲ್ಲಿ ನಾಲ್ಕುದಿನ ವ್ಯಾಯಾಮ ಮಾಡುವವರ ನೋವಿನ ಮಟ್ಟ ಶೇ.28ರಷ್ಟು ಕಮ್ಮಿಯಾಗಿದ್ದರೆ, ಮೂರು ದಿನ ವ್ಯಾಯಾಮ ಮಾಡುವವರಲ್ಲಿ ಶೇ.18 ಹಾಗೂ ಎರಡು ದಿನ ವ್ಯಾಯಾಮ ಮಾಡಿದರವಲ್ಲಿ ಶೇ.14ರಷ್ಟು ನೋವಿನ ಮಟ್ಟ ಕಡಿಮೆಯಾಗಿತ್ತು.

ಇದೇವೇಳೆ ಒಟ್ಟಾರೆಯಾಗಿ ಇವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಜೀವನ ಮಟ್ಟವು ಅನುಕ್ರಮವಾಗಿ ಶೇ.28, ಶೇ.22 ಮತ್ತು ಶೇ.16ರಷ್ಟು ಉನ್ನತಿ ಕಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಮಸ್ಯೆ ಎದುರಾದರೆ ಸುಮ್ನೆ ಮಲ್ಕೊಂಬಿಡಿ
4 ತಿಂಗಳ ಹಸುಳೆಗೆ ಮರುಜನ್ಮ ನೀಡಿದ ವಯಾಗ್ರ!
ಇದು ದೀರ್ಘಾಯುಷ್ಯದ ರಹಸ್ಯವಂತೆ!
ಬಹುಪಯೋಗಿ ನೆಲ್ಲಿಯ ಬಲ್ಲಿರೇನು?
ಬೊಜ್ಜು, ಕ್ಯಾನ್ಸರ್ ತಡೆಗೆ ಹೊಸ ಸೋಯಾ!
ಸಂತಸವಾಗಿರುವ ಮಕ್ಕಳು ಆರೋಗ್ಯಕರ ಭಾವೀ ಪ್ರಜೆಗಳು