ND ವಿಶ್ವಾದ್ಯಂತ ಹಬ್ಬಿರುವ ಮಹಾಮಾರಿ ಏಡ್ಸ್ ಅನ್ನು ಗುಣಪಡಿಸಲು ಅನುಕೂಲಕರವಾಗುವಂತ ವಿಚಾರ ಒಂದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು ಸಂತೋಷದ ಸುದ್ದಿಯೊಂದು ವರದಿಯಾಗಿದೆ. ಏಡ್ಸ್ಗೆ ಕಾರಣವಾಗಿರುವ ಎಚ್ಐವಿ ವೈರಸ್ ಮಾನವದೇಹದಲ್ಲಿ ಎಲ್ಲಿ ಅಡಗಿರುತ್ತದೆ ಎಂಬುದನ್ನು ಕೆನಾಡದ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.ಈ ಮಹತ್ವದ ಸಂಶೋಧನೆಯು ಮಾರಣಾಂತಿಕ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಲು ರಹದಾರಿ ಹಾಕಿಕೊಟ್ಟಿದೆ ಎಂಬುದಾಗಿ ಅಧ್ಯಯನ ಕೈಗೊಂಡಿರುವ ಸಂಶೋಧಕರು ಹೇಳುತ್ತಾರೆ.ಎಚ್ಐವಿ ಹೊಂದಿರುವವರಿಗೆ ಪ್ರಸಕ್ತವಿರುವ ವೈರಸ್ ನಿರೋಧಕ ಚಿಕಿತ್ಸೆಯು ಅದನ್ನು ಹಿಡಿತದಲ್ಲಿಡುತ್ತಿತ್ತೇ ವಿನಹ ಸಂಪೂರ್ಣವಾಗಿ