ND ಶಿಶುಗಳಿಗೆ ಅಥವಾ ಮಕ್ಕಳಿಗೆ ನೀಡುವ ಆಹಾರವನ್ನು ಎಚ್ಐವಿ ಪೀಡಿತ ತಾಯಂದಿರು ಅಥವಾ ಮಕ್ಕಳನ್ನು ನೋಡಿಕೊಳ್ಳುವವರು ತಿಂದು ನೋಡಿದ ಮೂಲಕ ನೀಡುವುದರಿಂದಲೂ ಎಚ್ಐವಿ ಸೋಂಕು ಹಬ್ಬಲು ಸಾಧ್ಯ ಎಂಬುದನ್ನು ಪತ್ತೆ ಮಾಡಿರುವ ಸಂಶೋಧಕರು ಇಂತಹ ಮೊದಲ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ.ಮಕ್ಕಳಿಗೆ ಆಹಾರವನ್ನು ನೀಡುವ ಮುಂಚಿತವಾಗಿ ಅದನ್ನು ರುಚಿನೋಡುವಾಗ ಅಥವಾ ತಿನ್ನುವ ವೇಳೆ ಎಚ್ಐವಿ ಸೋಂಕು ಪೀಡಿತ ರಕ್ತವು ಲಾಲರಸ ಅಥವಾ ಬಾಯಿಯ ಜೊಲ್ಲಿನ ಮೂಲಕ ಬುಹುತೇಕ ವರ್ಗಾವಣೆಯಾಗುತ್ತದೆ.ಎಚ್ಐವಿ ಸೋಂಕು ಪೀಡಿತ