ಅವಳಿಗದು ಚೊಚ್ಚಲ ಹೆರಿಗೆ. ಮಗು ಕೂಡಾ ಗಂಡು. ಮನೆಯವರ ಸಂಭ್ರಮ ಮತ್ತು ಸಂತಸಕ್ಕೆ ಪಾರವೇ ಇರುವುದಿಲ್ಲ. ತಾಯಿ ಮಗು ಮನೆಯವರ, ಬಂಧುಗಳ ಆರೈಕೆ ಸಾಂಗವಾಗಿ ನಡೆಯುತ್ತಿದೆ.ಇದ್ದಕ್ಕಿದ್ದಂತೆ ಅವಳು ಖಿನ್ನಳಾಗತೊಡಗುತ್ತಾಳೆ. ಮನೆಯವರ ಕೂಗಿಗೆ ಉತ್ತರಿಸದಷ್ಟು ಮಂಕಾಗಿದ್ದಳೆ. ಮಗು ಅತ್ತು ಕೆರೆದರೂ ಕಿವಿ ಕೇಳಿಸದ ಹಾಗೆ ಎಲ್ಲೋ ನೋಡಿ ಕುಳಿತಿರುತ್ತಾಳೆ. ಸ್ನಾನಕ್ಕೂ ಊಟ ಮಾಡಲೂ ಬಲವಂತ ಮಾಡಬೇಕು. ಏನಾಯಿತು ಎಂದರೆ ಏನಿಲ್ಲ ಎಂಬ ಉತ್ತರ. ರಾತ್ರಿಯಿಡಿ ನಿದ್ದೆ ಮಾಡದೆ ಎಚ್ಚರವಾಗಿದ್ದು, ಸುತ್ತಲೂ ನೋಡುತ್ತಿರುತ್ತಾಳೆ.