ಟಿಪ್ಸ್‌ | ಲೇಖನಗಳು
ಮುಖ್ಯ ಪುಟ » ವಿವಿಧ » ಆರೋಗ್ಯ » ಲೇಖನಗಳು » ಹಂದಿಜ್ವರ ತಡೆಗೆ ಸುಗಂಧ ಚಿಕಿತ್ಸೆ (swine flu | Aromatherapy | Eucalyptus | Tulsi)
 
ರಾಷ್ಟ್ರದಲ್ಲಿ ಹಂದಿಜ್ವರವೆಂಬ ಮಹಾಮಾರಿಯು ತೆಗೆದುಕೊಳ್ಳುತ್ತಿರುವ ಬಲಿಗಳ ಸಂಖ್ಯೆ ಹೆಚ್ಚುತ್ತಿದ್ದು ಜನತೆ ಕಂಗೆಟ್ಟಿದ್ದಾರೆ. ಪುಣೆ ಬಿಟ್ಟರೆ ಈ ಸಾಂಕ್ರಾಮಿಕ ರೋಗ ಹೆಚ್ಚು ಆಹುತಿ ಪಡೆದದ್ದು ಬೆಂಗಳೂರಿನಲ್ಲಿ. ಈ ರೋಗಕ್ಕೆ ದೈಹಿಕ ಹಾಗೂ ಮಾನಸಿಕವಾಗಿ ಬಲಿಯಾಗುವವರ ಸಂಖ್ಯೆಯು ಹೆಚ್ಚುತ್ತಿದೆ. ಇದರೊಂದಿಗೆ ಅಂತೆಕಂತೆಗಳ ವದಂತಿಯೂ ಹೆಚ್ಚುತ್ತಿದ್ದು ಜನತೆಯ ಆತಂಕ ಎಣೆಯಿಲ್ಲದಂತಾಗಿದೆ. ಹೀಗಾಗಿ ರೋಗದಿಂದ ದೂರ ಇರುವ ಉಪಾಯಕ್ಕಾಗಿ ಭಯಭೀತ ಮಂದಿ ಹುಡುಕುತ್ತಿದ್ದಾರೆ. ಸುಗಂಧ ಚಿಕಿತ್ಸೆ(ಅರೋಮಾ ಥೆರಪಿ)ಯ ಮೂಲಕವೂ ಇದರಿಂದ ದೂರ ಇರಬಹುದು ಎಂಬುದು ತಜ್ಞರ ಅಭಿಮತವಾಗಿದೆ.

ಹಂದಿ ಜ್ವರದ ಬಗ್ಗೆ ಅಷ್ಟೊಂದು ಆತಂಕ ಪಡುವ ಅಗತ್ಯವಿಲ್ಲ. ಮತ್ತು ಈ ಸೋಂಕು ತಗುಲಿದವರು ಬದುಕುವುದೇ ಇಲ್ಲ ಎಂಬೆಲ್ಲ ಚಿಂತೆ ಬೇಡ. ಇದೂ ಸಹ ಇತರ ಫ್ಲೂ ಜ್ವರದಂತೆಯೆ ಆಗಿರುತ್ತದೆ. ಈ ಜ್ವರ ತಗುಲಿದವರು ಗೊತ್ತೇ ಇಲ್ಲದಂತೆ ಗುಣಮುಖವಾಗಲೂ ಬಹುದು. ಯಾವುದಕ್ಕೂ ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಹಂದಿಜ್ವರ ಮಾತ್ರವಲ್ಲ, ಎಲ್ಲಾ ರೋಗಗಳಿಂದಲೂ ದೂರ ಇರುವುದೇ ರೋಗತಡೆಗೆ ಉತ್ತಮ ಉಪಾಯ.

ಹಂದಿಜ್ವರದಿಂದ ದೂರ ಉಳಿಯುವ ಕೆಲವು ಸುಲಭೋಪಾಯಗಳು ಇಲ್ಲಿವೆ. ಪರಿಮಳ ಚಿಕಿತ್ಸೆಗೆ ಯಾವ್ಯಾವ ತೈಲಗಳು ಉಪಯೋಗಿ ಎಂಬುದನ್ನು ನೋಡೋಣ.

"ಸುಗಂಧ ಚಿಕಿತ್ಸೆಯಲ್ಲಿ ಅವಶ್ಯಕ ಸುಗಂಧ ತೈಲಗಳನ್ನು ಬಳಸುವಿಕೆಯು ವೈರಸ್‌ಗಳ ಬೆಳವಣಿಗೆಗೆ ಸಹಾಯಕವಾಗುವ ಮಾಧ್ಯಮವನ್ನು ದೂರಇರಿಸುವ ಆಧಾರದಲ್ಲಿ ಕಾರ್ಯಎಸಗುತ್ತದೆ" ಎಂಬುದಾಗಿ ಸುಗಂಧ ಚಿಕಿತ್ಸಾ ತಜ್ಞ ಡಾ| ನರೇಶ್ ಅರೋರ ಹೇಳುತ್ತಾರೆ. ಹಂದಿಜ್ವರವನ್ನು ದೂರವಿರಿಸಲು ಈ ಕೆಳಗಿನ ತೈಲಗಳು ಪರಿಣಾಮಕಾರಿ ಕಾರ್ಯವೆಸಗುತ್ತವೆ.
* ನೀಲಗಿರಿ ತೈಲ
* ತುಳಸಿ ತೈಲ
* ರೋಸ್‌ಮೇರಿ ತೈಲ
* ಜುನಿಪರ್ ಬೆರಿ ತೈಲ
* ಲವಂಗ ತೈಲ

ಈ ತೈಲಗಳ ಬಳಕೆಯನ್ನು ಈ ಕೆಳಗಿನಂತೆ ಮಾಡಬಹುದು. ದುಗ್ಧರಸ ವ್ಯವಸ್ಥೆಯನ್ನು ವಿಷರಹಿತವಾಗಿಸುವುದು ಚಿಕಿತ್ಸೆಯ ಪ್ರಮುಖ ಕ್ರಿಯೆಯಾಗಿದೆ. ಎದೆ, ಶ್ವಾಸಕೋಶಗಳು ಮತ್ತು ಗಂಟಲು ಕಟ್ಟುವಿಕೆ ಲಕ್ಷಣವಿರುವ ಮೇಧಸ್ಸು ತಡೆ ವ್ಯವಸ್ಥೆಯು ಫ್ಲೂ, ಅಲರ್ಜಿಕ್ ಮತ್ತು ವೈರಸ್‌ಗಳ ಹೆಚ್ಚಳಕ್ಕೆ ಉತ್ತಮ ವಾತಾವರಣವನ್ನು ನಿರ್ಮಿಸುತ್ತದೆ. ಈ ಸುಗಂಧ ದ್ರವ್ಯ ಚಿಕಿತ್ಸೆಯು ಮೇಧಸ್ಸು ವ್ಯವಸ್ಥೆಯ ವಿಷರಹಿತಗೊಳಿಸುವಿಕೆ ಮತ್ತು ಶುಚಿತ್ವಗೊಳಿಸುವಿಕೆ ಮೂಲಕ ವೈರಸ್ ದಾಳಿಯ ಸಾಧ್ಯತೆಯನ್ನು ತಡೆಯುತ್ತದೆ.

ಚಿಕಿತ್ಸಾ ವಿಧಾನ:
ಈ ಮೇಲಿನ ಯಾವುದಾದರೂ ತೈಲದ ಎರಡರಿಂದ ನಾಲ್ಕರಷ್ಟು ಹನಿಯನ್ನು ಕುದಿಯುವ ನೀರು ಅಥವಾ ಸ್ಟೀಮರ್‌ಗೆ ಮಿಶ್ರಮಾಡಿ. ಬಿಸಿಯಾದ ನಾಸಿಕ ಅಥವಾ ಮುಖ ಆವಿಯನ್ನು ತೆಗೆದುಕೊಳ್ಳಿ. ದಿನಕ್ಕೆ ಎರಡ್ಮೂರು ಸರ್ತಿ ಐದರಿಂದ ಹತ್ತು ನಿಮಿಷಗಳ ಆವಿ ತೆಗೆದುಕೊಳ್ಳಬೇಕು. ಇದು ಗಂಟಲು ಮತ್ತು ಮೂಗು ಭಾಗದ ಕಟ್ಟುವಿಕೆಯನ್ನು ಸರಿಯಾಗಿಸುತ್ತದೆ.

ವಿಧಾನ 2:
ಒಬ್ಬ ಸಾಮಾನ್ಯ ವ್ಯಕ್ತಿ ಅಥವಾ ಇದೀಗಾಗಲೇ ಫ್ಲೂ ಲಕ್ಷಣಗಳಿರುವ ವ್ಯಕ್ತಿಯು ಕ್ಲಿನಿಕಲ್ ಪೆಡಿಕ್ಯೂರ್ ಮಾಡಿಸಿಕೊಳ್ಳಬಹುದು ಮತ್ತು ಮೊಣಕಾಲಿನ ಸುತ್ತ ಹಾಗೂ ಅದರ ಕೆಳಗಿನ ಭಾಗದಲ್ಲಿ ತುಳಸಿ ತೈಲದಿಂದ ಮಸಾಜ್ ತೆಗೆದುಕೊಳ್ಳಬಹುದು. ಇದರಿಂದಲೂ ಎದೆ, ಗಂಟಲು, ಶ್ವಾಸಕೋಶಗಳ ಕಟ್ಟವಿಕೆಯನ್ನು ತಡೆಯಬಹುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ
ನಿರೋಧಕ ಶಕ್ತಿ ಬಲವಾಗಿದ್ದರೆ ಮಾತ್ರ ಮಾನವದೇಹವು ರೋಗದೊಂದಿಗೆ ಹೋರಾಡಬಹುದಾಗಿದೆ. ನಿಮ್ಮ ರೋಗನಿರೋಧಕ ಶಕ್ತಿಯು ದುರ್ಬಲವಾಗುವುದನ್ನು ಸುಗಂಧ ಚಿಕಿತ್ಸೆಯು ತಡೆಯುತ್ತದೆ. ಜುನಿಪರ್ ಬೆರ್ರಿ ತೈಲವು ಈ ಕುರಿತು ಪರಿಣಾಮಕಾರಿಯಾಗಿ ಕಾರ್ಯವೆಸಗುತ್ತದೆ ಎಂದು ಪರಿಗಣಿಸಲಾಗಿದೆ. ಇದರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದ ಜೀವಕೋಶಗಳನ್ನು ಹೆಚ್ಚು ಶಕ್ತವಾಗಿಸುತ್ತದೆ. ಈ ತೈಲದ ಎರಡ್ಮೂರು ಬಿಂದುವನ್ನು ನೀರಿನಲ್ಲಿ ಬೆರೆಸಿ ಸ್ನಾನಮಾಡುವಾಗಲೂ ಸಹ ಬಳಸಬಹುದು.

ಕೀಟಾಣುಗಳಿಂದ ದೂರವಿರಿ
ಕೀಟಾಣುಗಳಿಂದ ದೂರವಿರುವುದು ಮತ್ತು ಶುಚಿತ್ವವನ್ನು ಕಾಪಾಡುವುದು ಉತ್ತಮ ವಿಧಾನ. ಸುಗಂಧಚಿಕಿತ್ಸೆಗೆ ಬಳಸುವ ತೈಲಗಳು ಆಂಟಿ-ಸೆಪ್ಟಿಕ್ ಗುಣಗಳನ್ನು ಹೊಂದಿವೆ.

ವಿಧಾನ
ಒಂದು ಬಿಂದು ಲವಂಗದ ಎಣ್ಣೆಯನ್ನು ಬಿಸಿನೀರಿನಲ್ಲಿ ಬೆರೆಸಿ ಗುಟುಗುಟುಕಾಗಿ ಕುಡುಯುವುದರಿಂದ ದೇಹದ ಆಂತರಿಕ ವ್ಯವಸ್ಥೆಯು ಸೋಂಕುರಹಿತವಾಗಲು ಸಹಕಾರಿಯಾಗುತ್ತದೆ.

ರೋಸ್‌ಮೇರಿ ತೈಲವನ್ನು ನೀವು ಕೈತೊಳೆಯುವ ನೀರಿನಲ್ಲಿ ಬೆರೆಸಿ. ಒಂದು ಗ್ಲಾಸು ನೀರಿಗೆ ಒಂದೆರಡು ಹನಿ ತೈಲವನ್ನು ಸೇರಿಸಿ ಕೈತೊಳೆಯುವುದು ಅತ್ಯಂತ ಉತ್ತಮವಾಗಿದೆ. ಅಂತೆಯೇ ನೀಲಗಿರಿ, ಲ್ಯಾವೆಂಡರ್ ಹಾಗೂ ತುಳಸಿ ತೈಲವನ್ನೂ ಇದೇ ರೀತಿಯಾಗಿ ಬಳಸಿಕೊಳ್ಳಬಹುದಾಗಿದೆ.

ಇದಲ್ಲದೆ ನೀವು ಜನಜಂಗುಳಿಯ ಸ್ಥಳಕ್ಕೆ ತೆರಳುವ ಮುನ್ನ ಈ ತೈಲಗಳನ್ನು ನಿಮ್ಮ ಮಾಸ್ಕ್ ಅಥವಾ ಕರವಸ್ತ್ರಗಳಿಗೆ ಒಂದು ಹನಿ ಚಿಮುಕಿಸಿಕೊಳ್ಳಿ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ