PTI ದಿನದ ಸಮಾರು ಶೇ.80ರಷ್ಟು ಸಮಯವನ್ನು ಕಚೇರಿ, ಶಾಲೆ ಹೀಗೆ ಕಟ್ಟಡದ ಒಳಗೇ ಸಮಯ ಕಳೆಯುವವರ ಉದ್ವಿಗ್ನತೆ ಹಾಗೂ ಒತ್ತಡವನ್ನು ಕಡಿಮೆಗೊಳಿಸಲು ಮನೆಯೊಳಗೆ ಇರಿಸುವ ಸಸಿಗಳು ಸಹಾಯ ಮಾಡುತ್ತವಂತೆ.ಕೆಲಸದಿಂದ ಉಂಟಾಗುವ ಒತ್ತಡ, ಆಯಾಸ, ತಲೆನೋವು ಹಾಗೂ ಗಂಟಲೊಣಗುವಿಕೆ ಮುಂತಾದ ಸಮಸ್ಯೆಗಳನ್ನು ಹೊಡೆದೋಡಿಸಲು ಕಚೇರಿಯೊಳಗಿನ ಹಸಿರು ಸಸಿಗಳು ಸಕಾರಾತ್ಮಕ ಪರಿಣಾಮ ಬೀರುತ್ತವೆ ಇದಲ್ಲದೆ ಒಳಾಂಗಣದಲ್ಲಿರಿಸುವ ಸಸಿಗಳು ಕೆಲಸದ ಉತ್ಪಾದಕತೆಯನ್ನೂ ಹೆಚ್ಚಿಸುತ್ತದೆ. ಸಸಿಗಳನ್ನು ಇರಿಸಿದ್ದ ವೇಳೆ ಕಂಪ್ಯೂಟರ್ ಕಾರ್ಯಗಳನ್ನು ಮಾಡುವವರ ಉತ್ಪಾದಕತೆಯಲ್ಲಿ ಶೇ.12ರಷ್ಟು