PR ಚಾಕೊಲೇಟ್ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ....? ಅದರಲ್ಲೂ, ಕ್ರೀಂ, ಮಿಲ್ಕ್, ಬಾದಾಮ್, ಕೊಬ್ಬರಿ ಹೀಗೆ ಹಲವು ರೀತಿಯಾ ವೈವಿಧ್ಯತೆಯನ್ನು ಚಾಕೊಲೇಟ್ನಲ್ಲಿ ನಾವು ಕಾಣುತ್ತೇವೆ. ಸಿಹಿ ಅಂದರೆ ಮಕ್ಕಳಿಗೆ ಪಂಚಪ್ರಾಣ ಅದರಲ್ಲೂ ಚಾಕೊಲೇಟ್ ಫ್ಲೇವರ್ ಇದ್ದರಂತು ಮಕ್ಕಳು ತುಂಬಾನೆ ಇಷ್ಟಪಟ್ಟು ತಿನ್ನುತ್ತಾರೆ. ಈಗ ಚಾಕೊಲೇಟ್ನಷ್ಟೆ ಸಿಹಿ ಸುದ್ದಿಯನ್ನು ಸಂಶೋಧಕರು ಚಾಕೊಲೇಟ್ ಪ್ರಿಯರಿಗೆ ನೀಡಿದ್ದಾರೆ...! ಚಾಕೊಲೇಟ್ ತಿನ್ನುವುದರಿಂದ ಹಲ್ಲು ಹಾಳಾಗುತ್ತದೆ, ಆರೋಗ್ಯಕ್ಕೆ ಹಾನಿಕರ ಎನ್ನುವ ಮಾತುಗಳೆಲ್ಲಾ ಸುಳ್ಳು ಎನ್ನುತ್ತಾರೆ