PR ಪುರಾತನ ಮೆಕ್ಸಿಕೋ ಜನರ ಆಹಾರವೆಂದು ನಂಬಲಾಗಿರುವ ಸ್ಪಿರುಲಿನಾ ಸಸ್ಯವು ಭಾರತದಲ್ಲಿ ತಲೆದೋರಿರುವ ಅಪೌಷ್ಟಿಕತೆ ಸಮಸ್ಯೆಯನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ ಎಂಬುದು ಎಂಬುದು ಇತ್ತೀಚಿಗಿನ ಸಂಶೋಧನೆಯಿಂದ ತಿಳಿದು ಬಂದಿದೆ. ನೀಲಿ ಹಸಿರು ಬಣ್ಣದ ಸಾದಾ ಸಸ್ಯದಿಂದ ತಯಾರಿಸಲಾದ ಕ್ಯಾಂಡಿಯು ಸಣ್ಣ ಮಕ್ಕಳ ಎಲ್ಲಾ ರೀತಿಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಹೊಸ ಅಧ್ಯಯನವು ತಿಳಿಸಿದೆ. ಸ್ಪಿರುಲಿನಾ ತುಂಬಾ ಚಿಕ್ಕದಾದ ಶುದ್ಧ ನೀರಿನಲ್ಲಿ ಬೆಳೆಯುವ ಸಸ್ಯವಾಗಿದ್ದು ತನ್ನಲ್ಲಿ ಸಮೃದ್ಧವಾದ ಪ್ರೋಟೀನ್, ನ್ಯೂಟ್ರೀನ್ಗಳನ್ನು ಒಳಗೊಂಡಿದೆ.