| ಮುಂದೆ ಓದಿ |
| ವಿಶ್ವಕ್ಕೆ ಮಹಾನ್‌ಮಹಾನ್ ಕೊಡುಗೆ ನೀಡಿರುವ ಭರತಖಂಡ ಸರ್ವಸ್ವತಂತ್ರವಾಗಿ ಆರು ದಶಗಳೇ ಸಂದಿವೆ. ಆದರೆ ಈ ಗಣತಂತ್ರವೆಂಬ ಸ್ವತಂತ್ರ ರಾಷ್ಟ್ರದಲ್ಲಿ ನಾವು ನಿಜವಾಗಿಯೂ ಸ್ವತಂತ್ರವಾಗಿದ್ದೆವೆಯೇ ಎಂಬ ಪ್ರಶ್ನೆ ಏಳುತ್ತಿದೆ. ಒಂದು ಕಾಲದಲ್ಲಿ ಅನುಮಾನದಿಂದಲೂ ನಿರ್ಲಕ್ಷದಿಂದಲೂ ನಮ್ಮನ್ನು ಕಾಣುತ್ತಿದ್ದ ಅಂತಾರಾಷ್ಟ್ರೀಯ ಸಮುದಾಯಗಳಿಂದು ನಮ್ಮ ಪ್ರಗತಿಯನ್ನು ಬೆರಗಿನಿಂದ ನೋಡುತ್ತಿವೆ. ಇದಕ್ಕೆ ನಾವು ಹೆಮ್ಮೆಪಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಷ್ಟು ಸುದೀರ್ಘ ಅವಧಿಗೆ ಹೋಲಿಸಿದರೆ ಅಪಾರವಾದ ಸಂಪನ್ಮೂಲವನ್ನು ಹೊಂದಿರುವ... | ಭಾರತ ಸೂಪರ್ ಪವರ್ ರಾಷ್ಟ್ರವಾಗುತ್ತಿದೆ, ಅಭಿವೃದ್ಧಿಶೀಲದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ದಾಪುಗಾಲಿಡುತ್ತಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ ಸೇರಿದಂತೆ ಪ್ರಗತಿಶೀಲ ರಾಷ್ಟ್ರಗಳೇ ಭಾರತದತ್ತ ಅಚ್ಚರಿಯ ದೃಷ್ಟಿ ನೆಟ್ಟಿವೆ. ಜಗತ್ತಿನ ಎಲ್ಲ ರಾಷ್ಟ್ರಗಳನ್ನು ಹೆದರಿಸುತ್ತಿದ್ದ ದೊಡ್ಡಣ್ಣ ಆರ್ಥಿಕ ಹೊಡೆತದಿಂದ ಕಂಗಾಲಾಗಿ, ಉಳಿದ ವಿದೇಶಿ ರಾಷ್ಟ್ರಗಳೂ ಆರ್ಥಿಕ ಸಂಕಷ್ಟಕ್ಕೆ ಗರಬಡಿದಂತೆ ಕೂತಿದ್ದರೆ, ಭಾರತ ಮಾತ್ರ ಏನೇ ಬಂದರು ಎದುರಿಸುತ್ತೇವೆ ಎಂಬ ದಿಟ್ಟತನದ ವರ್ತನೆ ತೋರಿತ್ತು. |