ಭಾರತ 61ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಎಲ್ಲೆಂದರಲ್ಲಿ ಭಾಷಣಗಳ ಸುರಿಮಳೆ, ಆಡಳಿತರೂಢ ಸರಕಾರ ಕೂಡ ಅಭಿವೃದ್ದಿಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತದೆ. ಸ್ವಾತಂತ್ರ್ಯ ಗಳಿಸಿ ಇಂದಿಗೆ ಆರು ದಶಕಗಳು ಸಂದಿವೆ. ಭಾರತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ಸೋಗಲಾಡಿತನದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಭಾರತ ಎದುರಿಸುತ್ತಿರುವ ಸಮಸ್ಯೆಗಳು ಮಾತ್ರ ಜನರನ್ನು ದಿಗಿಲುಗೊಳಿಸದೆ ಇರಲಾರದು.
ಒಂದೆಡೆ ಭಯೋತ್ಪಾದನೆ ಎಲ್ಲೆಂದರಲ್ಲಿ ತಾಂಡವಾಡುತ್ತಿದ್ದರೆ, ಮಹಾನಗರಗಳಲ್ಲಿನ ಸಾರಿಗೆ ಸಮಸ್ಯೆ, ವಿದ್ಯುತ್, ನಕ್ಸಲೀಸಂ, ಶೌಚಾಲಯ, ಮೂಲಭೂತ ಸೌಕರ್ಯ,ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಭಾರತ ನರಳುತ್ತಿದ್ದರೆ, ಮತ್ತೊಂದೆಡೆ ದೇಶದ ಬೆನ್ನೆಲುಬು ಎಂದು ಬಿರುದಾಂಕಿತನಾದ ರೈತರ ಸ್ಥಿತಿ ಮತ್ತೂ ಚಿಂತಾಜನಕವಾಗಿದೆ.
ಕೃಷಿ ಭಾರತದ ಆರ್ಥಿಕತೆಗೆ ಈಗಲೂ ಶೇ.20ರಷ್ಟು ಜಿಡಿಪಿಯನ್ನು ಕಾಣಿಕೆ ನೀಡುತ್ತಿದೆ. ರಾಷ್ಟ್ರದ ಒಟ್ಟು ಶೇ.60ರಷ್ಟು ಮಂದಿ ಕೃಷಿ ವಲಯದಲ್ಲಿ ಇದ್ದಾರೆ. ಅಷ್ಟಾಗಿಯೂ ದೇಶದ ರೈತರ ಗೋಳು ಪರಿಹಾರವಾಗಿಲ್ಲ. ನೆರೆಯ ಕಮ್ಯೂನಿಷ್ಟ್ ಆಡಳಿತದ ಚೀನಾ ಕೃಷಿ ಹಾಗೂ ಕೈಗಾರಿಕೆಯಲ್ಲಿ ಅಗಾಧ ಬೆಳವಣಿಗೆಯನ್ನು ಕಂಡಿದೆ. ಹಾಗಾದರೆ ನಾವು ಕೃಷಿಗೆ ಪ್ರಾಧಾನ್ಯತೆ ಕೊಟ್ಟಿರುವುದಾಗಿ ಹೇಳುತ್ತಾ ಬಂದಿದ್ದರೂ ಕೂಡ,ಅರವತ್ತು ವರ್ಷಗಳ ಬಳಿಕವೂ ಇವತ್ತು ರೈತರ ಸ್ಥಿತಿ ಏನಾಗಿದೆ.
ಒಂದೆಡೆ ಭಯೋತ್ಪಾದನೆ ಎಲ್ಲೆಂದರಲ್ಲಿ ತಾಂಡವಾಡುತ್ತಿದ್ದರೆ, ಮಹಾನಗರಗಳಲ್ಲಿನ ಸಾರಿಗೆ ಸಮಸ್ಯೆ, ವಿದ್ಯುತ್, ನಕ್ಸಲೀಸಂ, ಶೌಚಾಲಯ, ಮೂಲಭೂತ ಸೌಕರ್ಯ,ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಭಾರತ ನರಳುತ್ತಿದ್ದರೆ, ಮತ್ತೊಂದೆಡೆ ದೇಶದ ಬೆನ್ನೆಲುಬು ಎಂದು ಬಿರುದಾಂಕಿತನಾದ ರೈತರ ಸ್ಥಿತಿ ಮತ್ತೂ ಚಿಂತಾಜನಕವಾಗಿ
ರೈತರ ಸಾಲಮನ್ನಾದ ಘೋಷಣೆಯೊಂದಿಗೆ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ರೈತ ನೇಣಿಗೆ ಶರಣಾಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಇಮ್ಮಡಿಯಾಗುತ್ತಿದೆ. ಭಾರತದ ಅನೇಕ ಹಳ್ಳಿಗಳಲ್ಲಿ ಇವತ್ತಿಗೂ ವಿದ್ಯುತ್ ಇಲ್ಲ, ವೈಜ್ಞಾನಿಕ ಕೃಷಿ ಪದ್ದತಿಯತ್ತ ಯಾರ ಗಮನವೂ ಇಲ್ಲ. ಇಂತಹ ಕಾರಣಗಳಿಂದಾಗಿಯೇ ಕಳೆದ ಹತ್ತು ವರ್ಷಗಳಿಂದೀಚೆಗೆ ಲಕ್ಷಾಂತರ ಮಂದಿ ರೈತರು ಸಾವಿಗೆ ಶರಣಾಗಿದ್ದಾರೆ. ಆದರೂ ದೇಶದ ಮಹಾನ್ ರಾಜಕಾರಣಿಗಳು ರೈತರ ಆತ್ಮಹತ್ಯೆ ಕೃಷಿ ಸಂಬಂಧಿತ ವಿಷಯದಿಂದಾಗಿಲ್ಲ, ಅದು ಕೌಟುಂಬಿಕ ಕಾರಣಗಳು ಎಂಬುದಾಗಿ ಹಲುಬುತ್ತಾರೆ!!.
ರಾಷ್ಟ್ರದಲ್ಲಿ ಈವರೆಗೆ ಸಂಭವಿಸಿದ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.40ರಷ್ಟು ಸಂಭವಿಸಿರುವುದು ಕರ್ನಾಟಕದಲ್ಲಿ ಎಂಬುದನ್ನು ಗಮನಿಸಬೇಕಾಗಿದೆ. ಅದರಲ್ಲೂ ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ 65ಸಾವಿರ ಎಕರೆ ಭೂಮಿಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಲಕ್ಷಾಂತರ ರೈತರು ಭವಣೆ ಪಡುವಂತಾಗಿದೆ. ನ್ಯಾಯ ಕೇಳಿ ಪ್ರತಿಭಟನೆ ನಡೆಸುವ ರೈತರ ಮೇಲೆ ಗೋಲಿಬಾರ್ ನಡೆಸಲಾಗುತ್ತಿದೆ. ಇದೆಂತಹ ನ್ಯಾಯ?! ಇದು 61ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನೂತನವಾಗಿ ಅಧಿಕಾರದ ಗದ್ದುಗೆಗೆ ಏರಿ,ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿ ಸರ್ಕಾರ ರಾಜ್ಯ ರೈತರಿಗೆ ನೀಡಿದ ಇನಾಮು!!
ಆ ನಿಟ್ಟಿನಲ್ಲಿ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಅವರ ಟಿಪ್ಪಣಿ ಪ್ರಕಾರ ಕೆಲವೊಂದು ಅಂಶಗಳನ್ನು ಗಮನಿಸಿ, ರೈತ ದೇಶದ ಬೆನ್ನೆಲುಬು,ದೇಶದ ಆಧಾರ ಸ್ತಂಭ ಎಂದು ಬೊಬ್ಬಿಡುತ್ತಿರುವ ಭಾರತ ಹಾಗೂ ವಿದೇಶಗಳಲ್ಲಿ ಕೃಷಿಗೆ ನೀಡಿರುವ ಮಹತ್ವ ನಿಮಗೆ ವೇದ್ಯವಾಗುತ್ತದೆ. ವಿದೇಶಗಳಲ್ಲಿ ಪ್ರತಿ ಹಸುವಿನ ಸಾಕಾಣೆಗೆ ಪ್ರತಿದಿನ 150ರೂ.ಸಬ್ಸಿಡಿ ನೀಡಲಾಗುತ್ತದೆ. ಅಲ್ಲದೇ ಅಮೆರಿಕದ ನಿವ್ವಳ ರಾಷ್ಟ್ರೀಯ ಉತ್ಪನ್ನದಲ್ಲಿ ಕೃಷಿ ಪಾಲು ಕೇವಲ ಶೇ.4ರಷ್ಟಿದೆ. ಅಷ್ಟಾದರೂ ಅಮೆರಿಕ ಹತ್ತಿ ಬೆಳೆಗೆ 390ಕೋಟಿ ರೂಪಾಯಿ ಡಾಲರ್ ಸಬ್ಸಿಡಿ ನೀಡುತ್ತದೆ.
ಅಮೆರಿಕದಲ್ಲಿ ತಲಾ ಕೃಷಿಕನಿಗೆ 200ಹೆಕ್ಟೇರ್ ಜಮೀನು ಇದ್ದರೆ, ಭಾರತದಲ್ಲಿ ಇದೀಗ ರೈತರ ಬಳಿ 1.47ಹೆಕ್ಟೇರ್ ಮಾತ್ರ. ಅದರಲ್ಲೂ ವಿಶೇಷ ಆರ್ಥಿಕ ವಲಯ, ಕೈಗಾರಿಕೆಗಳ ಸ್ಥಾಪನೆಯ ಹೆಸರಲ್ಲಿ ರೈತರ ಭೂಮಿಯನ್ನು ವ್ಯವಸ್ಥಿತವಾಗಿ ಕಸಿಯಲಾಗುತ್ತಿದೆ. 2000ದಲ್ಲಿ ಭಾರತದಲ್ಲಿ ಪ್ರತಿ ಹೆಕ್ಟೇರಿಗೆ 20ಕ್ವಿಂಟಾಲ್ ಭತ್ತದ ಇಳುವರಿ ಇದ್ದರೆ, ಥಾಯ್ಲೆಂಡ್‌ನಲ್ಲಿ 32ಕ್ವಿಂಟಾಲ್, ಅದೇ ಅಮೆರಿಕದಲ್ಲಿ 70ಕ್ವಿಂಟಾಲ್. ಅಮೆರಿಕದಲ್ಲಿ ರೈತರ ಕುಟುಂಬ ಪ್ರತಿವರ್ಷ 30ಸಾವಿರ ಡಾಲರ್ ಸಬ್ಸಿಡಿ ಪಡೆಯುತ್ತದೆ.