ನಾಗೇಂದ್ರ ತ್ರಾಸಿ WD ಭಾರತ 61ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಎಲ್ಲೆಂದರಲ್ಲಿ ಭಾಷಣಗಳ ಸುರಿಮಳೆ, ಆಡಳಿತರೂಢ ಸರಕಾರ ಕೂಡ ಅಭಿವೃದ್ದಿಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತದೆ. ಸ್ವಾತಂತ್ರ್ಯ ಗಳಿಸಿ ಇಂದಿಗೆ ಆರು ದಶಕಗಳು ಸಂದಿವೆ. ಭಾರತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ಸೋಗಲಾಡಿತನದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಭಾರತ ಎದುರಿಸುತ್ತಿರುವ ಸಮಸ್ಯೆಗಳು ಮಾತ್ರ ಜನರನ್ನು ದಿಗಿಲುಗೊಳಿಸದೆ ಇರಲಾರದು.ಒಂದೆಡೆ ಭಯೋತ್ಪಾದನೆ ಎಲ್ಲೆಂದರಲ್ಲಿ ತಾಂಡವಾಡುತ್ತಿದ್ದರೆ, ಮಹಾನಗರಗಳಲ್ಲಿನ