ಕೃಷ್ಣವೇಣಿ ಕುಂಜಾರು ND ನಾವು ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ.ಮೊನ್ನೆ ಕಾಬೂಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ನಡೆದಾಗ ನಮ್ಮವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿಯವರ ಬಾಯಿಯಿಂದ ಉದುರಿದ ನುಡಿ ಮುತ್ತುಗಳಿವು. ಇದೊಂದೇ ಸಲವಲ್ಲ ಅದೆಷ್ಟು ಬಾರಿ ಭಾರತ ಭಯೋತ್ಪಾದಕರ ದಾಳಿಗೆ ನಲುಗಿತ್ತೋ ಅಷ್ಟೂ ಸಲವೂ ನಮ್ಮ ನಾಯಕರು ಇದೇ ಡೈಲಾಗನ್ನು ರಿಪಿಟೇಷನ್ ಮಾಡ್ತಾನೇ ಇದ್ದಾರೆ. ನಮ್ಮ ದೇಶದ ಮುಗ್ದ ಜನರ ಪ್ರಾಣವನ್ನು ಎಗ್ಗಿಲ್ಲದೆ ರಕ್ತ ಬೀಜಾಸುರರಂತೆ ಹೀರ್ತಾನೇ ಇದ್ದಾರೆ.ಅವರಿಗೂ