ರಾಕೇಶ್ ನಡಜಾರು WD ಇವತ್ತಿಗೂ ನೆನಪಿದೆ. ಯಾವತ್ತಿಗೂ ನೆನಪಿರುತ್ತದೆ. ಅಗಸ್ಟ್ 15ರ ಆ ಸಂಭ್ರಮ. ತ್ರಿವರ್ಣ ಧ್ವಜ ಗಾಳಿ ಸೀಳಿ ಕುಣಿಯುವಾಗ ಮೇರೆ ಮೀರಿ ಏರೋ ತೆರೆಗಳ ತರಹ ಕುಣಿದ ಆ ಕ್ಷಣ.ಅದೆಷ್ಟೋ ಪ್ರೀತಿ, ಉತ್ಸಾಹ, ಕನಸು, ಹೇಳ(ಬರೆಯ)ಲಾಗದ ಅವ್ಯಕ್ತ ಭಾವ, ಈ ನನ್ನ ತಾಯಿಭೂಮಿಗೆ ಮರುಹುಟ್ಟು ನೀಡಿದ ಆ ದಿನದ ಬಗ್ಗೆ. ಅದಕ್ಕಾಗಿ ಇದ್ದದ್ದನ್ನೆಲ್ಲ ತ್ಯಾಗ ಮಾಡಿದ, ತ್ಯಾಗ ಮಾಡಲು ಸಿದ್ಧರಾಗಿದ್ದ ಆ ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವಾಗ