ಜೋಮನ್ ವರ್ಗೀಸ್ ND ಸ್ವತಂತ್ರ ಭಾರತ ಅನೇಕ ಮಹನೀಯರ ತ್ಯಾಗಬಲಿದಾನಗಳ ಸಂಕೇತ. ಬ್ರಿಟಿಷರ ಕಪಿಮುಷ್ಟಿಗೆ ಸಿಲುಕಿ ನಲುಗುತ್ತಿರುವಾಗ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಹೋರಾಟಕ್ಕೆ ಕಂಕಣಬದ್ಧರಾಗಿ ನಿಂತ ಹೋರಾಟಗಾರರ ನೆನಪು ಅವಿಸ್ಮರಣೀಯ. ಅಂತಹ ನೋವು-ನಲಿವಿನ ಸ್ವತಂತ್ರ ಭಾರತದ ಇತಿಹಾಸ ರೋಚಕವಾದದ್ದು.ಸ್ವತಂತ್ರ ಭಾರತಕ್ಕೆ 61 ರ ಸಂಭ್ರಮ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಮತ್ತೊಮ್ಮೆ ಆ ಸುವರ್ಣ ಗಳಿಕೆಯ ಸ್ಮರಣೆಗೆ ಸಜ್ಜಾಗುತ್ತಿದೆ. ನೀಲ ನಭದಲ್ಲಿ ಹಾರುತ್ತಿರುವ ರಾಷ್ಟ್ರದ್ವಜ ತನ್ನ