ಗುಣವರ್ಧನ್ ಶೆಟ್ಟಿ ND 1940ರ ಮಾರ್ಚ್ 13, ಕಾಕ್ಸ್ಟೌನ್ ಹಾಲ್ನಲ್ಲಿ ಈಸ್ಟ್ ಇಂಡಿಯ ಒಕ್ಕೂಟ ಮತ್ತು ರಾಯಲ್ ಸೆಂಟ್ರಲ್ ಏಷ್ಯನ್ ಸೊಸೈಟಿಯ ಜಂಟಿ ಸಭೆ ನಿಗದಿಯಾಗಿತ್ತು. ಮೈಕೆಲ್ ಒ ಡಯರ್ ಭಾಷಣಕಾರರಲ್ಲಿ ಒಬ್ಬರಾಗಿದ್ದರು. ಸಿಖ್ ಯುವಕನೊಬ್ಬ ಪುಸ್ತಕವೊಂದರಲ್ಲಿ ರಿವಾಲ್ವರ್ ಅಡಗಿಸಿಟ್ಟುಕೊಂಡು ಕಾಕ್ಸ್ಟೌನ್ ಹಾಲ್ ಪ್ರವೇಶಿಸಲು ಯಶಸ್ವಿಯಾಗಿದ್ದ. ಸಭೆ ನಡೆದ ಬಳಿಕ ಎಲ್ಲರೂ ಎದ್ದುನಿಂತರು. ಡಯರ್ ಲಾರ್ಡ್ ಜೆಟ್ಲ್ಯಾಂಡ್ ಜತೆ ಮಾತನಾಡಲು ವೇದಿಕೆ ಏರಿದರು. ಸಿಖ್ ಯುವಕನ ಮನಸ್ಸಿನಲ್ಲಿ ದ್ವೇಷದ ಕಿಡಿ