ಕೃಷ್ಣವೇಣಿ ಕುಂಜಾರು WD ಕದಂ ಕದಂ ಬಡಾಯೆಗ ಖುಷೀ ಸೆ ಗೀತ್ ಗಾಯೆಗ...ಇಷ್ಟೇ ಇದ್ದಿದ್ದು ಚಿಂಟು ಮನದಲ್ಲಿ. ಸ್ವಾತಂತ್ರ್ಯ ದಿನಾಚರಣೆಯಂದು ಪದ್ಯ ಹೇಳ್ಳಿಕುಂಟು ಅಂತ ಅಮ್ಮನತ್ರ ಕಾಡಿಸಿ ಪೀಡಿಸಿ ಹೊಸ ಬಿಳಿ ಡ್ರೆಸ್ಸು, ಕೈಗೆ ಕೇಸರಿ ಬಿಳಿ ಹಸಿರು ಬಣ್ಣದ ಬಳೆ, ಕೆಂಪು ರಿಬ್ಬನ್ ಹಾಕಿಸಿಕೊಂಡಾಗಿತ್ತು. ಮತ್ತೆ ಅಪ್ಪ ಬೆಳಿಗ್ಗೆ ಬಾಯಿ ಕೆಂಪು ಮಾಡಿ ಉಗಿವ ಹೊತ್ತಿಗೆ ಮೆಲ್ಲನೆ ಹೆದರಿ ಹೆದರಿ ಹಿಂದಿನಿಂದ ನಿಂತು ಒಂದು ಧ್ವಜ ತೆಗಿಲಿಕ್ಕೆ ಎಂಟಾಣೆ