ND ಸ್ವಾತಂತ್ರ್ಯ ಅಂದರೆ ಬಂಧನದಿಂದ ಮುಕ್ತಿ. ದಬ್ಬಾಳಿಕೆಯಿಲ್ಲದೆ, ನಮ್ಮನ್ನು ನಾವೇ ಆಳುವಂತಹ ಯೋಜನೆ. ಆಗಸ್ಟ್ 15ರಂದು ಭಾರತದೆಲ್ಲೆಡೆ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಅಂದು ಎಲ್ಲಿ ನೋಡಿದರಲ್ಲಿ ತ್ರಿವರ್ಣ ಧ್ವಜವು ಹಾರಾಡುತ್ತಿರುತ್ತದೆ. ನಮ್ಮ ದೇಶದ ರಾಜಕೀಯ ಧುರೀಣರಿಂದ ಹಿಡಿದು ಎಲ್ಲಾ ಮಹಾನ್ ವ್ಯಕ್ತಿಗಳು ಅಂದು ಸ್ವಾತಂತ್ರ್ಯದ ಬಗೆಗೆ ಭಾಷಣ ಬೀಗುತ್ತಾರೆ. ಒಟ್ಟಿನಲ್ಲಿ ಸಂಭ್ರಮ ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ.ಆದರೆ, ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ನಮ್ಮ ದೇಶದಲ್ಲಿ ಇದೆ? ನಾವು ಸಂಪೂರ್ಣ ಸ್ವತಂತ್ರರೇ?