PTI ಸ್ವತಂತ್ರ ಭಾರತ 61ರ ಸ್ವಾತಂತ್ರ್ಯೋತ್ಸವದ ಗುಂಗಿನಲ್ಲಿದ್ದರೆ, ದೇಶದ ಮಹಾನಗರ ಸೇರಿದಂತೆ ಪ್ರಮುಖ ಪ್ರೇಕ್ಷಣೀಯ ಸ್ಥಳ, ದೇವಾಲಯಗಳ ಪರಿಸರದಲ್ಲಿ ಆತಂಕದ ಛಾಯೆ ಮಡುಗಟ್ಟಿದೆ. ಆಂಧ್ರಪ್ರದೇಶದ ತಿರುಪತಿ, ಕಾಶಿ ವಿಶ್ವನಾಥ ದೇವಾಲಯ, ತಮಿಳುನಾಡಿನ ಮಧುರೈ ಮೀನಾಕ್ಷಿ, ತಾಜ್ ಮಹಲ್, ಕುತುಬ್ ಮೀನಾರ್ ಒಂದೇ ಎರಡೇ... ಎಲ್ಲೆಡೆ ಭಯ ಮಿಶ್ರಿತ ವಾತಾವರಣ ತುಂಬಿಕೊಂಡಿದೆ!ಸ್ವಾತಂತ್ರ್ಯ ಸಂಭ್ರಮಾಚರಣೆಯ ಸಂದರ್ಭದಲ್ಲಾದರೂ ಸ್ವತಂತ್ರವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಂತಸವನ್ನು ಹಂಚಿಕೊಳ್ಳೋಣ, ಇಲ್ಲವೇ ದೇವಾಲಯಕ್ಕೆ ಹೋಗಿ ಹರಕೆ ಸಲ್ಲಿಸಿ ಬರೋಣ ಎಂದುಕೊಂಡಿದ್ದರೆ,