ನಾಗರಾಜ್ ಬಿ.ಎನ್PIB ಮತ್ತೆ ಆಗಸ್ಟ್ 15 ಬಂದಿದೆ. ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಂಡ ದಿನ. ಇಂದು ಎಲ್ಲ ಶಾಲಾ-ಕಾಲೇಜುಗಳು, ಸರ್ಕಾರಿ ಮುಖ್ಯ ಕಚೇರಿಗಳ ಮೇಲೆ ಭಾರತದ ಧ್ವಜವನ್ನು ಹಾರಿಸಿ ಸಿಹಿ ಹಂಚಿ ಉದ್ದುದ್ದ ಭಾಷಣ ಮಾಡಲು ರಾಜಕೀಯ ನಾಯಕರಿಗೆ, ಸ್ವಯಂ ಘೋಷಿತ ಸಮಾಜ ಸೇವಕರಿಗೆ ಇದೊಂದು ಸುವರ್ಣ ಅವಕಾಶ. ಭಾರತೀಯರ ಆಂತರಿಕ ಕಚ್ಚಾಟ ಮೇರೆ ಮೀರಿ ಕೇವಲ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರು ಭಾರತವನ್ನು ರಾಜಕೀಯ ದಾಸ್ಯದಲ್ಲಿ ಇಟ್ಟುಕೊಳ್ಳುವಂತಾಯಿತು. ಜಗತ್ತಿಗೆ ಶಾಂತಿಮಂತ್ರಿ