ಪ್ರೀತಿಪ್ರತಿ ವರ್ಷದ ಸ್ವಾತಂತ್ರ್ಯೋತ್ಸವಕ್ಕೂ ಈ ಸ್ವಾತಂತ್ರ್ಯೋತ್ಸವಕ್ಕೂ ವ್ಯತ್ಯಾಸವಿದೆ. ಏಕೆಂದರೆ ಈ ವರ್ಷ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಮೂಲೆಗುಂಪಾಗಿದ್ದ, ತುಚ್ಛವಾಗಿ ಪರಿಗಣಿಸಲ್ಪಟ್ಟಿದ್ದ ಪಂಗಡವೊಂದಕ್ಕೆ ವಿಶೇಷ ಸ್ವಾತಂತ್ರ್ಯ ದೊರಕಿದೆ. ಹೌದು, ನಾನು ಮಾತನಾಡುತ್ತಿರುವುದು ಸಲಿಂಗಕಾಮಿಗಳ ಬಗ್ಗೆ. ಭಾರತದಲ್ಲಿನ ಸಲಿಂಗಿಗಳು ಇಷ್ಟು ಕಾಲ ತಮ್ಮ ಉತ್ತಮ, ಸಮಾನವಾದ ಗೌರವಯುತ ಬದುಕಿಗಾಗಿ ಮಾಡಿದ ಹೋರಾಟಕ್ಕೆ ಅಂತಿಮವಾಗಿ ನ್ಯಾಯ ದೊರಕಿದೆ. ಇದು ಒಂದರ್ಥದಲ್ಲಿ ಅವರಿಗೆ ಸಿಕ್ಕ ಸ್ವಾತಂತ್ರ್ಯವೆಂದರೂ ತಪ್ಪಲ್ಲ. ಸಮ್ಮತ ಸಲಿಂಗಕಾಮ ಅಪರಾಧವೇನಲ್ಲ ಎಂಬ ತೀರ್ಪು ಸಾವಿರಾರು