ನಾಗೇಂದ್ರ ತ್ರಾಸಿPTI ಭಾರತ ಸೂಪರ್ ಪವರ್ ರಾಷ್ಟ್ರವಾಗುತ್ತಿದೆ, ಅಭಿವೃದ್ಧಿಶೀಲದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ದಾಪುಗಾಲಿಡುತ್ತಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ ಸೇರಿದಂತೆ ಪ್ರಗತಿಶೀಲ ರಾಷ್ಟ್ರಗಳೇ ಭಾರತದತ್ತ ಅಚ್ಚರಿಯ ದೃಷ್ಟಿ ನೆಟ್ಟಿವೆ. ಜಗತ್ತಿನ ಎಲ್ಲ ರಾಷ್ಟ್ರಗಳನ್ನು ಹೆದರಿಸುತ್ತಿದ್ದ ದೊಡ್ಡಣ್ಣ ಆರ್ಥಿಕ ಹೊಡೆತದಿಂದ ಕಂಗಾಲಾಗಿ, ಉಳಿದ ವಿದೇಶಿ ರಾಷ್ಟ್ರಗಳೂ ಆರ್ಥಿಕ ಸಂಕಷ್ಟಕ್ಕೆ ಗರಬಡಿದಂತೆ ಕೂತಿದ್ದರೆ, ಭಾರತ ಮಾತ್ರ ಏನೇ ಬಂದರು ಎದುರಿಸುತ್ತೇವೆ ಎಂಬ ದಿಟ್ಟತನದ ವರ್ತನೆ ತೋರಿತ್ತು. ಅವೆಲ್ಲಕ್ಕಿಂತ ಹೆಚ್ಚಾಗಿ ಭಾರತದ ಆರ್ಥಿಕ