ರಶ್ಮಿ ಪೈ ಬೀಡಿ ಸಿಗಾರ್ ಸೇದಬೇಡರೋಗ ಬೇಗನೆ ಬರುವುದುಮಟ್ಕಾ ಗುಟ್ಕಾ ಚಟವೆ ಬೇಡಇದ್ದ ಹಣವ ಕಳೆಯಲು || 1||ಬ್ರಾಂಡಿ ವಿಸ್ಕಿ ಸೇವಿಸದಿರುಮತ್ತು ಕುತ್ತು ತರುವುದುಪೋಲಿಗಳ ಸಂಗ ಮಾಡಬೇಡಪೋಲಿಸರ ಗುದ್ದು ಸಿಗುವುದು || 2||ಗುರುಹಿರಿಯರಿಗೆ ಋಣಿಯಾಗಿದ್ದರೆಉನ್ನತ ಸ್ಥಾನದಿ ನೀ ಮೆರೆವೆಎಲ್ಲರೊಂದಿಗೆ ಸ್ನೇಹದಿಂದ ಬೆರೆತಿರೆ ಎಂದೂಜನಮನದ ವಿಶ್ವಾಸ ನೀ ಅರಿವೆ || 3||ಉತ್ತಮ ವಿದ್ಯೆಯ ಕಲಿಯುತಲಿದ್ದರೆಜ್ಞಾನ ಶಿಖರವನು ಚುಂಬಿಸುವೆದೇಶದ ಹಿತಕ್ಕೆ ದುಡಿಯುತಲಿದ್ದರೆದೇಶಪ್ರೇಮಿಯ ಗೌರವವ ಪಡೆವೆ|| 4|| |