ಹಿಂದಿನ ಕಾಲದಲ್ಲಿ ಒಬ್ಬ ರಾಜನಿದ್ದ. ಆತನ ಹೆಣ್ಣುಮಕ್ಕಳು ಬಹಳ ಸುಂದರವಾಗಿದ್ದರು. ಅದರಲ್ಲಿ ರಾಜನ ಕೊನೆಯ ಪುತ್ರಿ ಚಂದ್ರಮುಖಿ ಬಹಳ ಸ್ಪುರರೂಪಿಯಾಗಿದ್ದಳು. ರಾಜನ ಕೋಟೆಯ ಸಮೀಪವೇ ಒಂದು ದೊಡ್ಡ ಹಾಗು ದಟ್ಟ ಅಡವಿ ಇತ್ತು. ಆ ಅಡವಿಯ ಮದ್ಯೆ ಒಂದು ಆಳವಾದ ಸಂದರವಾದ ಕೊಳ ಇತ್ತು. ರಾಜನ ಸಣ್ಣ ಪುತ್ರಿ ಹೆಚ್ಚಿನ ಭಾರಿ ಆ ಕೊಳದ ಬದಿ ಹೋಗಿ ಆಡುತ್ತಿದ್ದಳು. ಚಿನ್ನದ ಚೆಂಡನ್ನು ಗಾಳಿಗೆ ಎಸೆದು ಅದನ್ನು ಬೊಗಸೆಯಲ್ಲಿ ಹಿಡಿಯುವುದು ಚಂದ್ರಮುಖಿಯ ನೆಚ್ಚಿನ ಆಟವಾಗಿತ್ತು. ಒಂದು ಬಾರಿ ಆ ರೀತಿ ಆಡುತ್ತಿರುವಾಗ ಆ ಚಿನ್ನದ ಚೆಂಡು ತನ್ನ ಕೈತಪ್ಪಿ ಹತ್ತಿರದ ಕೊಳಕ್ಕೆ ಬಿದ್ದಿತು. ಆ ಕೊಳ ಭಾರೀ ಆಳವಾಗಿದ್ದು, ಯಾರು ಅದರ ತಳವನ್ನು ನೋಡಲು ಸಾದ್ಯವಾಗುವಂತಿರಲಿಲ್ಲ. ಚೆಂಡು ಕೊಳಕ್ಕೆ ಬಿದ್ದದನ್ನು ಕಂಡು ಚಂದ್ರಮುಖಿ ಜೋರಾಗಿ ಅಳಲು ಪ್ರಾರಂಭಿಸಿದಳು. ಹೀಗೆ ಚಂದ್ರಮುಖಿ ಅಳುತ್ತಿರುವಾಗ ಕೊಳದಿಂದ, ರಾಜಕುಮಾರಿ ನೀವು ಏಕೆ ಅಳುತ್ತಿದ್ದೀರಿ ಎಂಬ ಪ್ರಶ್ನೆ ಹೊರಬಂದಿತು. ಚಂದ್ರಮುಖಿ ಕೊಳದತ್ತ ನೋಡುತ್ತಾಳೆ ಆಗ ಒಂದು ಮಂಡೂಕ ಭಾವಿಯಿಂದ ತನ್ನ ತಲೆ ಹೊರಹಾಕಿದ್ದನ್ನು ನೋಡಿದಳು.ಹಾ ನೀನು ಮುದಿಯ ಜಲ ಜೀವಿ, ಈಗ ಮಾತನಾಡಿದ್ದು ನಿನಾ? ನನ್ನ ಚಿನ್ನದ ಚೆಂಡು ಕೊಳಕ್ಕೆ ಬಿದ್ದಿದೆ ಅದಕ್ಕೆ ನಾನು ಅಳುತ್ತಿದ್ದೇನೆ ಎಂದು ಹೇಳಿದಳು.ಆಗ ಮಂಡೂಕ ನೀನು ಅಳಬೇಡ, ನಾನು ಆ ಚೆಂಡನ್ನು ವಾಪಸುತರುತ್ತೇನೆ. ಆದರೆ ಅದರ ಬದಲಿಗೆ ನೀನು ಏನು ಕೊಡುವಿ? ಎಂದು ಕೇಳಿತು.ಅದಕ್ಕೆ ರಾಜಕುಮಾರಿ ಚಂದ್ರಮುಖಿ, ನಿನಗೆ ಏನು ಬೇಕು ನನ್ನ ಚಿನ್ನದ ಕಿರೀಟ, ಮುತ್ತು ರತ್ನಗಳು ಏನು ಬೇಕು ಕೇಳು ಎಂದು ಉತ್ತರಿಸಿದಳು.ಆದಕ್ಕೆ ಪ್ರತಿಕ್ರಿಯಿಸಿದ ಮಂಡೂಕ ನನಗೆ ಬಟ್ಟೆ, ಕಿರೀಟಗಳ ಅಗತ್ಯವಿಲ್ಲ. ಒಂದು ವೇಳೆ ನೀನು ನನ್ನನ್ನು ಪ್ರೀತಿಸುವುದಾದರೆ ನನ್ನ ಸಹವರ್ತಿಯಾಗಿರಬೇಕು. ನನ್ನನ್ನು ನಿನ್ನ ಅರಮನೆಗೆ ಕರೆದುಕೊಂಡು ಹೋಗಿ, ನಿನ್ನೊಂದಿಗೆ ಚಿನ್ನದ ತಟ್ಟೆಯಲ್ಲಿ ಊಟಮಾಡಲು ಬಿಡಬೇಕು ಮತ್ತು ನಿನ್ನ ಹಾಸಿಗೆಯಲ್ಲಿ ಮಲಗಲು ಬಿಡಬೇಕು ಆ ಭರವಸೆ ಕೊಟ್ಟಗೆ ನಾನು ನಿನ್ನ ಚಿನ್ನದ ಚೆಂಡನ್ನು ಕೊಳದಿಂದ ವಾಪಸು ತರುತ್ತೇನೆ ಎಂದು ಹೇಳಿತು.ಆಗ ರಾಜಕುಮಾರಿ ಒಂದು ವೇಳೆ ನೀನು ನನಗೆ ಚೆಂಡನ್ನು ವಾಪಸುಕೊಟ್ಟರೆ ನಾನು ನಿನ್ನ ಬಯಕೆಯನ್ನು ಈಡೇರಿಸುತ್ತೇನೆ ಎಂದು ಹೇಳಿದಳು. ಆದರೆ ತನ್ನ ಮನಸ್ಸಿನಲ್ಲೇ ಈ ಹುಚ್ಚು ಮಂಡೂಕ ಏನು ಮಾತನಾಡುತ್ತಿದೆಯೋ, ಅದು ಬೇರೆ ಮಂಡೂಕದೊಂದಿಗೆ ಇಲ್ಲೇ ಇರಬೇಕು. ಅದು ಮಾನವರ ಜತೆ ಜೀವಿಸಲು ಸಾದ್ಯವಿಲ್ಲ ಎಂದು ಯೋಚಿಸಿದಳು. ಆದರೆ ಚಂದ್ರಮುಖಿ ಭರವಸೆ ಸಿಕ್ಕ ಕೂಡಲೇ ಮಂಡೂಕ ಕೊಳದ ಒಳಕ್ಕೆ ಹೋಗಿ ಆ ಚಿನ್ನದ ಚೆಂಡನ್ನು ಮೇಲಕ್ಕೆ ತಂದು ಹುಲ್ಲಿನ ಮೇಲೆ ಬಿಸಾಕಿತು. ರಾಜಕುಮಾರಿ ತನ್ನ ಚೆಂಡನ್ನು ಮತ್ತೊಮ್ಮೆ ನೋಡಿದ ಖುಷಿಯಲ್ಲಿ ಅದನ್ನು ಹಿಡಿದು ಅರೆಮನೆಯತ್ತ ಓಡುತ್ತಾ ಹೋದಳು. ಈ ಕಡೆ ಮಂಡೂಕ ರಾಜಕುಮಾರಿಯನ್ನು ಎಷ್ಟು ಕರೆದರೂ ಅದು ಕೇಳಿಸಲಿಲ್ಲ. |