ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಬಾಲಿವುಡ್ನಲ್ಲಿ ಹೆಸರುಗಳಿಸಿದ್ದರೆ, ಬಚ್ಚನ್ ತಂದೆ ಹರಿವಂಶರಾಯ್ ಬಚ್ಚನ್ ಶ್ರೀವಾಸ್ತವ್ ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿ ಮೇರುವ್ಯಕ್ತಿತ್ವ ಹೊಂದಿದವರು. 20ನೇ ಶತಮಾನದ ಆದಿಯಲ್ಲಿಯೇ ತಮ್ಮ ಛಾಪನ್ನು ಮೂಡಿಸಿದ್ದ ಹರಿವಂಶ್ 'ಮಧುಶಾಲಾ' ಮೂಲಕ ಖ್ಯಾತಿಗಳಿಸಿದರು.
ಉತ್ತರ ಪ್ರದೇಶ ಸಮೀಪದ ಅಲಹಾಬಾದ್ನ ಪ್ರತಾಪ್ಗಢ್ ಜಿಲ್ಲೆಯ ಪಾಟ್ಟಿ ಎಂಬ ಪುಟ್ಟ ಗ್ರಾಮದಲ್ಲಿ ಬಚ್ಚನ್ ಜನಿಸಿದ್ದರು. ಅವರದ್ದು ಸಂಪ್ರದಾಯಸ್ಥ ಕಾಯಸ್ಥ ಕುಟುಂಬ. ಪ್ರತಾಪ್ ನರೈನ್ ಶ್ರೀವಾಸ್ತವ್ ಮತ್ತು ಸರಸ್ವತಿ ದಂಪತಿಗಳ ಹಿರಿಯ ಪುತ್ರರಾಗಿದ್ದ ಅವರನ್ನು ಮನೆಯಲ್ಲಿ ಪ್ರೀತಿಯಿಂದ ...