ಶಹಿದ್ ಎ ಅಜಮ್ ಭಗತ್ ಸಿಂಗ್ ಅವರ ಜನನವಾಗಿ ಇಂದಿಗೆ ಸರಿಯಾಗಿ ನೂರು ವರ್ಷಗಳಾದವು. ತನ್ನ ನಿಮಿತ್ಯ ಅಮೃತಸರನಲ್ಲಿ, ಜಲಿಯನ್ ವಾಲಾ ಭಾಗ್ ಹತ್ಯಾಕಾಂಡ ನಡೆದ ಸ್ಥಳದಲ್ಲಿ ನೂರಾರು ಯುವಕರು ಸೇರಿ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಭಗತ್ ಸಿಂಗ್ ಅವರ ಜನ್ಮಾದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಶಹೀದ್ ಭಗತ್ ಸಿಂಗ್ ಅವರಿಗೆ ನೇಣು ಶಿಕ್ಷೆ ವಿಧಿಸಲು ಅಂದಿನ ಬ್ರಿಟಿಷ್ ಸರಕಾರ ಸಾಕ್ಷಿಯಾಗಿ ಬಳಸಿಕೊಂಡ ಅವರು ಓದಿದ ಪುಸ್ತಕಗಳು ಇಂದಿಗೂ ಲಾಹೋರ್‌ನಲ್ಲಿ ಅನಾಥವಾಗಿ ಬಿದ್ದಿವೆ.
1929 ರಲ್ಲಿ ನೇಣು ಗಂಬಕ್ಕೆ ಏರಿದ ಮಹಾನ್ ಕ್ರಾಂತಿಕಾರಿ ಓದಿದೇಶದ ಸ್ವಾತಂತ್ರ್ಯ ಅಭ್ಯುದಯದ ಆದರ್ಶ ಬೆಳೆಸಲು ಸಹಕಾರಿಯಾದ ಆ ಪುಸ್ತಕಗಳು ಇಂದು ಮಲ್ಕಾನಾದಲ್ಲಿ ಕೆಳ ನ್ಯಾಯಾಲಯದಲ್ಲಿ ಕೇವಲ ದಾಖಲೆಗಳ ರೂಪದಲ್ಲಿ ಬಿದ್ದಿವೆ ದೇಶದ ಸ್ವಾತಂತ್ರ್ಯ ಸಂಗ್ರಾಮದ ಕುರುಹಗಳಾಗಿ ಇರಬೇಕಾಗಿದ್ದ ಆ ದಾಖಲೆಗಳು ಇಂದಿಗೂ ಅದೇ ಪರಿಸ್ಥಿತಿಯಲ್ಲಿ ಇವೆ ಎಂದು ಭಗತ್ ಸಿಂಗ್ ಸಂಬಂಧಿ ಪ್ರೋ ಜಗಮೋಹನ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದು, ಭಗತ್ ಸಿಂಗ್ ಅಂದು ಓದಿರುವ ಆ ಪುಸ್ತಕಗಳನ್ನು ರಕ್ಷಿಸುವ ಪ್ರಯತ್ನ ಮತ್ತು ಪಡೆಯುವ ಪ್ರಯತ್ನ ಸಾಗಿದೆ ಎಂದು ಹೇಳಿದ್ದಾರೆ.
ಆಗ್ರಾದ ನಾಯಿ ಕಿ ಮಂಡಿಯಲ್ಲಿದ್ದ ಭಗತ್ ಸಿಂಗ್ ಅವರ ಕಾರ್ಯಾಲಯದಲ್ಲಿ 70 ಕ್ಕೂ ಹೆಚ್ಚು ಲೇಖಕರ 175 ಪುಸ್ತಕಗಳಿದ್ದವು ಬ್ರಿಟಿಷ್ ಪೊಲೀಸ್ ಅಧಿಕಾರಿ ಸ್ಯಾಂಡರರ್ಸ್ ಕೊಲೆಯ ನಂತರ ಈ ಎಲ್ಲ ಪುಸ್ತಕಗಳನ್ನು ವಶಪಡಿಸಿಕೊಂಡ ಬ್ರಿಟಿಷ್ ಸರಕಾರ,ನ್ಯಾಯಾಲಯದಲ್ಲಿ ಭಗತ್ ಸಿಂಗ್ ವಿರುದ್ಧ ಸಾಕ್ಷಿ ರೂಪದಲ್ಲಿ ಬಳಸಿತು ಎಂದು ಇರ್ಪಾನ್ ಹಬೀಬ್ ಬರೆದ ಪುಸ್ತಕವೊಂದರ ಬಿಡುಗಡೆ ಸಮಾರಂಭದಲ್ಲಿ ಹೇಳಿದರು.

ಭಗತ್ ಸಿಂಗ್ ಎಂದಿಗೂ ಹಿಂಸಾವಾದಿಯಾಗಿರಲಿಲ್ಲ. ಅವರ ಇನ್‌ಕ್ವಿಲಾಬ್ ಜಿಂದಾಬಾದ್ ಘೋಷಣೆ ನಿರಂತರ ಅದ್ಯಯನದ ಫಲಶ್ರುತಿ. ಸಾಮಾನ್ಯವಾಗಿ ಅಂದಿನ ಅವರ ವಿರೋಧಿ ಆದರ್ಶವಾದಿಗಳು ಭಗತ್ ಸಿಂಗ್ ಓರ್ವ ಹಿಂಸಾಪ್ರೀಯ ವ್ಯಕ್ತಿ ಎಂದು ಬಿಂಬಿಸಿದ್ದರು ಇದು ತಪ್ಪು ಎಂದು ಹೇಳಿದರು.
|