ಓದುಗ ಮಿತ್ರರೆ,
ಪ್ರತಿಯೊಬ್ಬನೊಳಗೂ ಒಬ್ಬ ಲೇಖಕನಿದ್ದಾನೆ, ಕತೆಗಾರನಿದ್ದಾನೆ, ಕವಿ ಇದ್ದಾನೆ. ಅಂತಸ್ಥವಾಗಿರುವ ಸಾಹಿತ್ಯದ ಸಾಮರ್ಥ್ಯವನ್ನು ಹೊರಗೆಳೆಯಲು ನಾವು ಮೊದಲ ಹೆಜ್ಜೆ ಇಡಬೇಕಷ್ಟೆ. ನೀವೂ ಕಥೆ ಬರೆಯಬಾರದೇಕೆ ಎಂದು ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ.
ಬರೆಯುವ ಯೋಚನೆಯನ್ನು ಮುಂದೂಡಿದರೆ ಕೆಲಸ ಕೆಡುತ್ತದೆ. ಹಾಗಾಗಿ ಈಗಲೇ ಪೆನ್ನು ಪೇಪರು ಕೈಗೆತ್ತಿಕೊಳ್ಳಿ. ನಿಮ್ಮ ಬರವಣಿಗೆ ಸಾಮರ್ಥ್ಯವನ್ನು ಒರೆಗೆ ಹಚ್ಚಿ. ಪುಟ್ಟ ಕಥೆ ಬರೆಯಿರಿ, ನಮಗೆ ಕಳುಹಿಸಿ. ಆಯ್ಕೆಯಾದ ಕಥೆಗಳನ್ನು ನಾವು ಪ್ರಕಟಿಸುತ್ತೇವೆ. ಈ ನಿಮ್ಮ ಕೆಲಸವನ್ನು ವಿಶ್ವಾದ್ಯಂತ ಹರಡಿಕೊಂಡಿರುವ ಕೋಟ್ಯಂತರ ಕನ್ನಡಿಗರು ಓದಿ ಮೆಚ್ಚಿಕೊಳ್ಳಲಿ.
ಈ ಸಣ್ಣ ಕಥೆ ಫುಲ್‌ಸ್ಕೇಪ್ ಹಾಳೆಯಲ್ಲಿ 5 ಪುಟಗಳನ್ನು ಮೀರದಿರಲಿ. ಜತೆಯಲ್ಲಿ ನಿಮ್ಮದೊಂದು ಭಾವಚಿತ್ರ, ಸಂಪರ್ಕ ವಿಳಾಸ, ಇ-ಮೇಲ್ ಐಡಿ ಇರಲಿ. ನೀವೇ ಬೆರಳಚ್ಚಿಸಿ ಕಳುಹಿಸುವುದಾದರೆ, ಅದರ ಮುದ್ರಿತ ಪ್ರತಿಯೊಂದನ್ನು ಕಳುಹಿಸಿ. ಅದರಲ್ಲಿ ನಿಮ್ಮ ಸಹಿ ಇರಲಿ. ಮುಖ್ಯವಾದ ವಿಷಯವೆಂದರೆ, ಈ ಕಥೆ ನಿಮ್ಮ ಸ್ವಂತ ಬರವಣಿಗೆ ಮತ್ತು ಬೇರೆಲ್ಲೂ ಪ್ರಕಟವಾಗಿಲ್ಲ ಎಂಬುದನ್ನು ದೃಢೀಕರಿಸುವ ಲಿಖಿತ ಭರವಸೆಯ ಪತ್ರವೂ ಇರಬೇಕಾದುದು ಕಡ್ಡಾಯ.
ಯಾವುದೇ ಸಂದೇಹಗಳಿದ್ದಲ್ಲಿ, ನೀವು customer.care@webdunia.net ಸಂಪರ್ಕಿಸಬಹುದು.
ನೀವು ಸ್ವರಚಿತ ಕಥೆಗಳನ್ನು ಕಳುಹಿಸಬೇಕಾದ ವಿಳಾಸ:
Editor (Kannada Story Section) Webdunia.com (India) Pvt Ltd No.2, Kripa Shankari Street Near Dr. CL Mehta School West Mambalam, Chennai [TN] 600 033 India
|