ಅಭಿಮನ್ಯು ಕನ್ನಡ ಬ್ಲಾಗು ಲೋಕದಲ್ಲಿ ಅರಳುತ್ತಿರುವ ಕುಸುಮಗಳು ಬೀರುತ್ತಿರುವ ಕಂಪನ್ನು ಆಸ್ವಾದಿಸಿಯೇ ತೀರಬೇಕು. ಉದ್ದುದ್ದ ಲೇಖನಗಳು/ಕಾವ್ಯಗಳನ್ನು ಓದಲು ಪುರುಸೊತ್ತಿಲ್ಲದವರಿಗೆ ಆತ್ಮೀಯವಾಗುತ್ತಿರುವ, ಕವನ ಪ್ರಿಯರನ್ನು ಮಿಂಚಿನಂತೆ ಸೆಳೆಯುತ್ತಿರುವ ಬ್ಲಾಗುಗಳಲ್ಲಿ ಸುಪ್ತದೀಪ್ತಿ ಅವರ ಹರಿವ ಲಹರಿ (suptadeepti.blogspot.com) ಬ್ಲಾಗ್ ಕೂಡ ಒಂದು.ಹರಿವ ತೊರೆ ತೀರದಲಿ.... ಎಲೆ ಹಸಿರು ಬಳ್ಳಿಯಲಿ.... ಎಂಬ ಪಂಚ್ ಲೈನ್‌ನೊಂದಿಗೆ ಸುಪ್ತದೀಪ್ತಿ ನಾಮದಲ್ಲಿ ಬ್ಲಾಗಿಸುತ್ತಿರುವ ಅವರ ಕವನಗಳು ಇಷ್ಟವಾಗುವುದು ಅದರಲ್ಲಿರುವ ವಾಸ್ತವತೆಯ ತುಡಿತಕ್ಕೆ. ಹೆಚ್ಚಿನ ಕವನಗಳು ಅಂತ್ಯಪ್ರಾಸದೊಂದಿಗೆ ಲಯಬದ್ಧವಾಗಿರುತ್ತವೆ.ಇತ್ತೀಚಿನ ಪೋಸ್ಟಿಂಗ್‌ಗಳನ್ನು