ಅಭಿಮನ್ಯು WD ಅಂತರ್ಜಾಲದ ಬ್ಲಾಗುದಾಣಗಳಲ್ಲಿ ಭಾವನೆಗಳು ಹೇಗೆ ಹರಿದಾಡುತ್ತವೆ ಎನ್ನುವುದಕ್ಕೆ ಮತ್ತೊಂದು ಕುರುಹು ಇಲ್ಲಿದೆ. ಈ ಬಾರಿ ವಾರದ ಬ್ಲಾಗ್ ಶೋಧಕ್ಕಾಗಿ ತೆರಳಿದಾಗ ತಟ್ಟನೇ ಗಮನ ಸೆಳೆದದ್ದು ಮೌನಗಾಳ (hisushrutha.blogspot.com). ಅದ್ರಲ್ಲಿರೋ ಪೋಸ್ಟ್ನ ತಲೆ ಬರಹವೇ ಗಮನ ಸೆಳೆಯಿತು- ಅಮ್ಮ ಬಂದಿದ್ದಳು ಅಂತ. ಅದು ಪ್ರಕಟವಾದ ಬರೇ ಒಂದು ದಿನದೊಳಗೆ ಅದಕ್ಕೆ ಬಂದಿರೋ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಸಾಕು, ಆ ಬರಹದ ಭಾವನಾತ್ಮಕ ಸೆಳೆತ ಎಷ್ಟಿರಬಹುದು ಎಂಬುದು ವೇದ್ಯವಾಗಬಹುದು. ಸುಶ್ರುತರ ಬರಹ