ಡಾ. ಎಸ್.ವಿ.ನರಸಿಂಹನ್ ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್|ಭಾವಿಸಿದ ಜನಪದಂ ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ||ದಕ್ಷಿಣದ ಕಾವೇರಿ ನದಿಯಿಂದ ಹಿಡಿದು ಉತ್ತರದ ಗೋದಾವರಿ ನದಿಯವರೆಗೆ ಹರಡಿದ್ದ ಕರ್ನಾಟಕ ದೇಶ, ವಸುಧೆಯಲ್ಲಿಯೇ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿತ್ತು ಎಂಬುದು ಕನ್ನಡದಲ್ಲಿ ನಮಗೆ ದೊರಕಿರುವ ಮೊಟ್ಟಮೊದಲ ಗ್ರಂಥವಾದ ಕವಿರಾಜ ಮಾರ್ಗದಲ್ಲಿ ಉಲ್ಲೇಖಿತ ಅಂಶ. ಕ್ರಿ.ಶ.814 ಅಂದರೆ ಒಂಭತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟ ಅರಸ ನೃಪತುಂಗ ಮಹಾರಾಜನ ಆಸ್ಥಾನ ಕವಿ ಶ್ರೀವಿಜಯ ಬರೆದಿರುವ ಈ ಗ್ರಂಥದಲ್ಲಿ