ಅಭಿಮನ್ಯು ಕನ್ನಡದಲ್ಲಿರುವ ಬ್ಲಾಗು ನಕ್ಷತ್ರಗಳಲ್ಲಿ ಸದ್ದಿಲ್ಲದೆಯೇ ಸುದ್ದಿ ಮಾಡುತ್ತಿರುವ ಬ್ಲಾಗುಗಳಲ್ಲಿ ನವಿಲುಗರಿ (navilagari.wordpress.com) ಎಂಬ ಭಾವನೆಗಳ ಮಹಾಪೂರವೇ ಹರಿಯುತ್ತಿರುವ ಬ್ಲಾಗೊಂದು ಗಮನ ಸೆಳೆಯುತ್ತದೆ. ಅದರ ಒಡೆಯ ಸೋಮು ಅವರೇ ಹೇಳಿಕೊಂಡಂತೆ, ಓದಿದ್ದು ಎಸ್ಸೆಸ್ಸೆಲ್ಸಿ ಮಾತ್ರ. ಮಲೆನಾಡಿನ ಸಾಗರದವರಾದ ಅವರ ಈ ಬ್ಲಾಗಿನಲ್ಲಿರುವ ಕವನಗಳು ಎದೆಯಾಳಕ್ಕೆ ಮಿದುವಾಗಿ ಚುಚ್ಚಿ ಬಿಡುತ್ತವೆ. ಆದರೆ ಆಗುವ ಅನುಭೂತಿಯಂತೂ ನೋವೋ, ನಲಿವೋ ಎಂಬುದು ಥಟ್ಟನೆ ಅರ್ಥವಾಗದ ವಿಷಯ.ಅವರ ಭರಪೂರ ಭಾವನೆಗಳ ಸಂಗಮವೇ ಆಗಿರುವ ಕವನಗಳತ್ತ ಒಂದು