ಮನದಲ್ಲಿ ಆಗಾಗ್ಗೆ ಧುತ್ತನೆ ಮೂಡಿ ಮರೆಯಾಗುತ್ತಿರುವ ಯೋಚನೆಗಳನ್ನು ಹಿಡಿದಿಡಲು ಬ್ಲಾಗು ಎಂಬುದೊಂದು ವೇದಿಕೆ ಇಂದು ಜನಜನಿತ. ಅಕ್ಷರಗಳ ಅಕ್ಕರೆಯ ಜಗತ್ತು ಸೃಷ್ಟಿಸುವುದಕ್ಕಾಗಿಯೇ ಬ್ಲಾಗಿಗಿಂತಲೂ ಹೆಚ್ಚು ಅವಕಾಶಗಳು, ಸಾಧ್ಯತೆಗಳಿರುವ, ನಿಮ್ಮದೇ ಪುಟ್ಟ ತಾಣವೊಂದನ್ನು ನೀವು ಹೊಂದಬಹುದು. ಅದೂ ಉಚಿತವಾಗಿ.ಅಂತರ್ಜಾಲದಲ್ಲಿ ನಿಮ್ಮದೇ ಒಂದು ಪೋರ್ಟಲ್ ಇದ್ದರೆ ಹೇಗೆ ಎಂಬ ಆಲೋಚನೆಯಲ್ಲಿರುವವರಿಗೆ ವೆಬ್ದುನಿಯಾ ಸಹಾಯ ಮಾಡುತ್ತದೆ. ಈಗಾಗಲೇ ನಿಮ್ಮದೇ ಭಾಷೆಯಲ್ಲಿ ಇ-ಮೇಲ್, ಶುಭಾಶಯ ಪತ್ರಗಳು ಮುಂತಾದ ಸೇವೆಗಳನ್ನು ವೆಬ್ ಲೋಕಕ್ಕೆ ಪರಿಚಯಿಸಿರುವ ವೆಬ್ದುನಿಯಾದ ಮತ್ತೊಂದು