ಕನ್ನಡ ಸಾಹಿತ್ಯ ವಲಯದಲ್ಲಿ ಪರಿಚಿತವಾಗಿರುವ ಮತ್ತು ಕನ್ನಡ ಆನ್ಲೈನ್ ಲೋಕದಲ್ಲಿ ಪ್ರಸಿದ್ಧಿ ಪಡೆದಿರುವ ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಜ್ಯೋತಿ ಮಹಾದೇವ್ ಅವರ ಎರಡು ಕೃತಿಗಳು ಜುಲೈ ಕೊನೆಯ ವಾರ ಬೆಂಗಳೂರಿನಲ್ಲಿ ಸಾಹಿತ್ಯಲೋಕಕ್ಕೆ ಅರ್ಪಣೆಗೊಳ್ಳಲಿವೆ.ಭಾನುವಾರ ಜು.27ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಸುಚಿತ್ರ ಫಿಲ್ಮ್ ಸೊಸೈಟಿ ಸಭಾಂಗಣದಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಒಂದು ವಿಶೇಷತೆಯೂ ಇದೆ. ಅಶಕ್ತ ಓದುಗರಿಗೆ ನೆರವಾಗುವ ನಿಟ್ಟಿನಲ್ಲಿ ಈ ಕೃತಿಗಳನ್ನು ಅವರು ಅರ್ಪಿಸಲಿದ್ದಾರೆ.ಆನ್ಲೈನ್