ಭಾನುವಾರ ಬೆಳಗಾಮುಂಚೆ ಏಳೋದು ಅಂದ್ರೆ ನಮ್ಮೊಳಗಿನ ಸೋಮಾರಿಗೆ ಸಿಕ್ಕಾಪಟ್ಟೆ ಕಿರಿಕಿರಿಯಾಗೋ ಸಂಗತಿ. ಆದರೂ ಏಳಬೇಕಾದಂತಹ ದಿನ ಇದಾಗಿತ್ತು: 27 ಜುಲೈ 2008. ಹತ್ತು ಗಂಟೆ ಮೂವತ್ತು ನಿಮಿಷಕ್ಕೆ ಕಾಫಿ-ತಿಂಡಿ ಸಮೇತ ಕಾಯ್ತಿರ್ತೀವಿ, ಬನ್ನಿ ಅಂತ ಸುಪ್ತದೀಪ್ತಿ, ತುಳಸಿಯಮ್ಮ -ಇಬ್ರೂ ಪ್ರೀತಿಯಿಂದ ಕರೆದಿದ್ರು. ಹೋಗ್ಲಿಲ್ಲಾಂದ್ರೆ ಬೈಸಿಕೊಳ್ಳಬೇಕಾಗತ್ತೆ ಅಂತ ನಾವೂ ಹೋದ್ವಿ.ಬಾಂಬಿನಂತಿದ್ದ ಇಡ್ಲಿಗಳು ಸುಚಿತ್ರಾದ ಬಾಗಿಲಲ್ಲೇ ನಮ್ಮನ್ನು ಸ್ವಾಗತಿಸಿದವು. ಬೀಳ್ತಿದ್ದ ಸಣ್ಣ ಮಳೆಯಲ್ಲಿ ನೆನೀತಾ ಬಿಸಿಬಿಸಿ ಕಾಫಿ ಕುಡಿದು ನಾವು ಸುಚಿತ್ರಾದ ಒಳಗೆ