WD ಕನ್ನಡ ಕಾರ್ಟೂನು ಮತ್ತು ಕ್ಯಾರಿಕೇಚರ್ ಪ್ರಪಂಚದಲ್ಲಿ ಸಿದ್ಧ-ಪ್ರಸಿದ್ಧ ಹೆಸರು ಹರಿಣಿ. ಸುಮಾರು 30 ವರ್ಷಗಳ ಸುದೀರ್ಘ ಅವಧಿಯಲ್ಲಿ ಕನ್ನಡ ವಿವಿಧ ನಿಯತಕಾಲಿಕಗಳು, ದೈನಿಕಗಳಲ್ಲಿ ಹರಿಣಿ ಅವರ ಗೆರೆಗಳು ಅದೆಷ್ಟೋ ಓದುಗರ ಮುಖದಲ್ಲಿ ನಗುವರಳಿಸಿವೆ.ನಿಮ್ಮನ್ನು ನೋಡಿದ ತಕ್ಷಣವೇ ಪೆನ್ನು/ಕುಂಚ ಹಿಡಿದು ತಟಪಟನೆ ಗೆರೆ ಎಳೆದು ಕಾಗದದಲ್ಲಿ ನಿಮ್ಮ ಮುಖ ಮೂಡಿಸುವ ಕಲೆ ಸಿದ್ಧಿಸಿರುವ ಹರಿಣಿಯವರ ನಗಿಸುವ ಗೆರೆಗಳು ಅಥವಾ ಮನರಂಜನಾ ವ್ಯಂಗ್ಯಚಿತ್ರಗಳು (ಅವರೇ ಹೇಳಿಕೊಳ್ಳುವಂತೆ Entertoonment) ಇನ್ನು ಮುಂದೆ ನಿಮ್ಮ