ಹನ್ನೆರಡನೆಯ ಶತಮಾನ ಕನ್ನಡನಾಡಿನಲ್ಲಿ ಬಹುಮುಖ ಕ್ರಾಂತಿಯನ್ನು ಉಂಟುಮಾಡಿದ ಕಾಲ. ಈ ಕಾಲದ ಕ್ರಾಂತಿಯ ಮುಂಚೂಣಿಯಲ್ಲಿದ್ದವರು ಬಸವಣ್ಣನವರು.
ಸಾಮಾಜಿಕ,ಧಾರ್ಮಿಕ ಹಾಗೂ ಸಾಹಿತ್ಯಿಕ ವಲಯದಲ್ಲಿ ಸ್ಥಿತ್ಯಂತರಗಳಿಗೆ ಕಾರಣರಾದವರು. ಶರಣ ಧರ್ಮದ ಪ್ರಸಾರ, ಕಾಯಕ ನಿಷ್ಟೆ,ಮಾನವತಾವಾದದಲ್ಲಿ ದೃಡವಿಶ್ವಾಸದಂತಹ ಮೌಲಿಕ ವಿಚಾರಗಳನ್ನು ವಚನದ ಮೂಲಕ ಹರಡುವಲ್ಲಿ ಬಸವಣ್ಣ ಮಾಡಿದ ಅಂದೋಲನ ಇಂದಿಗೂ ಸಮಾಜ ಚಿಂತಕರಿಗೆ ದಾರಿದೀಪ.
ಬಸವಣ್ಣನವರ ಹುಟ್ಟು ಹಾಗೂ ಬಾಲ್ಯದ ಕುರಿತು ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ.ಬಿಜಾಪೂರ ಜಿಲ್ಲೆಯ ಬಸವನಬಾಗೆವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆ ಎಂಬುವರ ಮಗನಾಗಿ ಹುಟ್ಟಿದ ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆರಳ ವಿರೋಧಿಯಾಗಿದ್ದರು.
ಶಿವ ಭಕ್ತರ ಕಥೆಗಳು ಆತನ ಮೇಲೆ ವಿಶೇಷ ಪ್ರಭಾವ ಬಿರಿದವು. ಬಸವನ ಬಾಗೆವಾಡಿಯನ್ನು ತ್ಯಜಿಸಿದ ನಂತರ ಕೂಡಲ ಸಂಗಮದಲ್ಲಿ ಶಿವಾರಾಧಾನೆಯಲ್ಲಿ ತೋಡಗಿದರು ಎಂದೂ ಈಶಾನ್ಯ ಗುರುಗಳ ಆಶಿರ್ವಾದ ಪಡೆದು ವೀರಶೈವ ದರ್ಮದ ಕುರಿತು ಅದ್ಯಯನ ಮಾಡಿದರು.
ಬಸವಣ್ಣನವರು ಬಿಜ್ಜಳನ ಮಂತ್ರಿಯಾಗಿದ್ದು ಸಹ ಒಂದು ಅಪೂರ್ವ ಘಟನೆ.ಮಂಗಳವೇಡೆಯಲ್ಲಿ ಸಿದ್ದದಂಡಾದಿಪ ಕರಣಿಕರಾಗಿದ್ದ ಒಂದು ದಿನ ಲೆಕ್ಕದಲ್ಲಿ ಆಗಿದ್ದ ತಪ್ಪನ್ನು ಕುಶಾಗ್ರ ಮತಿಯಾದ ಬಸವಣ್ಣ ತೋರಿಸಿಕೊಟ್ಟ. ಇದರಿಂದಾಗಿ ಅಪಾರ ಹೊನ್ನು ಉಳಿಯಿತು.ಬಿಜ್ಜಳ ಅಧಿಕಾರಕ್ಕೆ ಬಂದ ಮೇಲೆ ಬಸವಣ್ಣ ಭಂಡಾರಿಯಾಗಿ ಅಧಿಕಾಗ ಸ್ವಿಕರಿಸಿದರು.
|