ಭಾರತಾಂಬೆಯ ಮಡಿಲ ಮಕ್ಕಳು ನಮ್ಮದೊಂದೇ ಕುಲವು ಜಾತಿ ನೀತಿಯ ಭೇವಿವಿಲ್ಲವು ನಮ್ಮದೊಂದೇ ಜಾತಿಯು ನಮ್ಮದೊಂದೇ ನೀತಿಯು
ಹಿಂದು ಮುಸ್ಲಿಮ್ ಕ್ರೈಸ್ತ ಸಿಖ್ಖರು ಜೈನ್ ಬೌದ್ಧರು ಎಲ್ಲಿರೊ ಒಂದೇ ತಾಯಿಯ ಮಕ್ಕಳು ನಮ್ಮ ಮಣ್ಣಿನ ಮಕ್ಕಳು
ಒಂದೆ ರಕ್ತವು ಒಂದೆ ಪ್ರಾಣವು ಒಂದೆ ತನವು ನಮ್ಮದು ಒಂದೆ ಮನವು ನಮ್ಮದು ಒಂದೆ ಗಾಳಿ ಒಂದೆ ನೀರು ಒಂದೆ ಮಣ್ಣು ನಮ್ಮದು ಒಂದೆ ಧ್ಯೇಯ ಒಂದೇ ತತ್ವ ಒಂದೆ ಉಸಿರು ನಮ್ಮದು
ಸಾಕು ಘರ್ಷಣೆ ಸತ್ಯ ಘೋಷಣೆ ಯಿಂದ ನಮಗೆ ಮುಕ್ತಿಯು ಒಂದೆ ಸುಖವು ನಮ್ಮದು ಒಂದೆ ನೋವು ನಮ್ಮದು ಒಂದೆ ಬಲವು ಒಂದೆ ಛಲವು ಒಂದೆ ಗುರಿಯು ನಮ್ಮದು
ಭಾಷೆ ಧರ್ಮ ಹಲವು ಇದ್ದರು ಹೃದಯ ಭಾಷೆ ನಮ್ಮದು ಮನುಜ ಧರ್ಮ ನಮ್ಮದು ರಾಜ್ಯ ಹಲವು ಇದ್ದರೇನು ನಾಡು ಒಂದೇ ನಮ್ಮದು ಬೀಡು ಒಂದೆ ನಮ್ಮದು
ಶ್ರೇಷ್ಠ ಕವಿಗಳ ಧರ್ಮವೀರರ ಪಡೆದ ನಾಡು ನಮ್ಮದು ಪುಣ್ಯಭೂಮಿ ನಮ್ಮದು ದೇಶದೆಳ್ಗೆಗೆ ನಾಡ ಸೇವೆಗೆ ಹಗಲು ರಾತ್ರಿಯು ದುಡಿಯುವಾ
ಸರ್ವತ್ಯಾಗವ ಮಾಡುವಾ ಏಕಕಂಠದಿ ಏಕನಾದದಿ ಮೊಳಗುವಾ ದುಷ್ಟ ಶಕ್ತಿಯ ತುಳಿಯುವಾ ಸತ್ಯ ಶಾಂತಿಯ ಧರ್ಮನೀತಿಯ ಐಕ್ಯದಿಂದಲಿ ಬಾಳುವಾ
- ಡಾ| ಶ್ರೀಕೃಷ್ಣ ಭಟ್ ಅರ್ತಿಕಜೆ
|