ಮುಖ್ಯ ಪುಟ > ವಿವಿಧ > ಸಾಹಿತ್ಯ > ಕವನ > ಕವನ: ಮಳೆ ಬರಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕವನ: ಮಳೆ ಬರಲಿ
ಎಸ್.ಎಲ್. ಸುರೇಂದ್ರ ಕುಮಾರ್
ಸುರೇಂದ್ರ ಕುಮಾರ್
WD




ಬರಲಿ ಮಳೆ, ಮಳೆ ಬರಲಿ
ಭರಣಿ ಮಳೆ ಬರಲಿ
ಸ್ವಾತಿ ಚಿತ್ತಾ ತರಲಿ
ಅಶ್ವಿನಿ ಬಂದು ಹರಸಲಿ.

ಬರಲಿ ಮಳೆ, ಮಳೆ ಬರಲಿ
ಬರಿದ ಭುವಿಗೆ ನೀರುಣಿಸಿ ತಣಿಸಲಿ
ಹಸಿರ ರಾಶಿ ಹರಡಲಿ
ಕೋಗಿಲೆಯ ಗಾನ ಮೊಳಗಲಿ.

ಬರಲಿ ಮಳೆ, ಮಳೆ ಬರಲಿ
ಕೃತಿಕ, ರೋಹಿಣಿ ಧಮ ಧಮನೆ ಹರಿಯಲಿ
ಮೃಗಶಿರವು ಮಂಜಿನ ಧವಳದಂತೆ
ಆರ್ದ್ರಾವು ಹನಿ ಹನಿಯ ಗೂಡಿ ಹರಿಯಲಿ.

ಬರಲಿ ಮಳೆ, ಮಳೆ ಬರಲಿ
ತಂಪು ತಂಪಾಗಲಿ ಭುವಿಯೊಳಗಿನ ಕಾವು ಹಾರಲಿ
ಕಂಪುಕಂಪಾಗಲಿ ಗಿಡಮರಗಳಾಗಂಧ ಹರಡಲಿ
ರಾಗನು ರಾಗದಲಿ ಝರಿಯು ಜಳಜಳನೆ ಹರಿಯಲಿ.

ಬರಲಿ ಮಳೆ, ಮಳೆ ಬರಲಿ
ವಿಶಾಲ ಧರಣಿಗೆ ವಿಶಾಖ ಬಂದು ಹರಸಲಿ
ಅನುರಾಧವು ಅನುಕೂಲ ಸಿಂಧುವಾಗಿ ಬರಲಿ
ಜೇಷ್ಠ ಮೂಲ ಪೂಜಾಗಳಾದಿಯಾಗಿ ಸುರಿಯಲಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಳೆ ಬರಲಿ, ಸುರೇಂದ್ರ ಕುಮಾರ್, ಕವನ, Rain
ಮತ್ತಷ್ಟು
ನನ್ನಣ್ಣ
ಕೋಡಗನ ಕೋಳಿ ನುಂಗಿತ್ತ
ನಿವೇದನೆ
ಶೋಧ
ಬೇವು ಬೆಲ್ಲ - ಭಾಗ 2
ಬೇವು ಬೆಲ್ಲ - ಭಾಗ 1