ಎಂದಿನಂತೆ ರದ್ದಿ ಅಂಗಡಿಗಳಿಂದ ತಂದ, ವಿಜ್ಞಾನಕ್ಕೆ ಸಂಬಂಧಪಟ್ಟ ಹಳೆ ಮ್ಯಾಗಜಿನ್‌ಗಳನ್ನು ಕಲೆಹಾಕಿಕೊಂಡು ವೆಂಕಟಾಚಲ ಕುಳಿತಿದ್ದ. ಸೈನ್ಸ್ ಆಫ್ ಎನಿಮಲ್ ಸೈನ್ಸ್‌ನಲ್ಲಿ ಡಾ. ಕೆಲ್ಲಿ, ಡಿಎನ್ಎ ಬಗ್ಗೆ ಬರೆದ ಲೇಖನ ಅವನ ಮನಸ್ಸನ್ನು, ಗೋಕಾಕ್ ಫಾಲ್ಸ್‌ನ ರೋಪ್‌ವೇ ಬ್ರಿಡ್ಜ್ ತರಹ ಅತ್ತಿತ್ತ ಅಲುಗಾಡಿಸುತ್ತಿತ್ತು. ಇದ್ಹೇಗೆ ಸಾಧ್ಯ? ಸಾವಿರ ವರ್ಷಗಳ ಹಿಂದಿನ ಮಾನವನಿಗೂ, ಇಂದಿನ ಮಾನವನಿಗೂ ಅಜಗಜಾಂತರ ವ್ಯತ್ಯಾಸ ಇದೆ. ಸಾವಿರ ವರ್ಷ ಹಿಂದೆ ಇದ್ದ ಡಿಎನ್ಎ ಕಣಗಳಲ್ಲಿನ ವಂಶಾವಳಿ ಗುಣಗಳು ಇಂದಿಗೂ