ಗುಣವರ್ಧನ ಶೆಟ್ಟಿ ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಭಾರತದ ರಾಜ್ಯಗಳ ಸ್ಥಾಪನೆಗೆ ಭಾಷೆಗಳನ್ನು ಮಾನದಂಡವಾಗಿ ಬಳಸಲಾಯಿತು. ರಾಜರ ಆಡಳಿತವಿದ್ದ, ಕನ್ನಡಭಾಷಿಕರ ವಿವಿಧ ಪ್ರದೇಶಗಳನ್ನು ತೆಕ್ಕೆಗೆ ತೆಗೆದುಕೊಂಡು ಮೈಸೂರು ರಾಜ್ಯವನ್ನು ರಚಿಸಲಾಯಿತು. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಜಿಲ್ಲೆಗಳು ನೂತನ ರಾಜ್ಯದಲ್ಲಿ ವಿಲೀನವಾಯಿತು. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಪ್ರದೇಶದ ಜನರು ರಾಜ್ಯಕ್ಕೆ ಮೈಸೂರಿನ ನಾಮಕರಣವನ್ನು ಇಷ್ಟಪಡಲಿಲ್ಲ. ಈ ಹೆಸರಲ್ಲಿ ಬದಲಾವಣೆ ಮಾಡಬೇಕೆಂದು ಒತ್ತಾಯಿಸುತ್ತಿದ್ದರು. ಸುದೀರ್ಘ