ದೀಪಕ್ ಮಧ್ಯಸ್ಥ ಬೆನ್ನಿನಲ್ಲಿ ಇಡೀ ಭೂಮಿಯ ಭಾರ ಹೊತ್ತವನಂತೆ, ಶಾಲೆ ಚೀಲವನ್ನು ಹೊತ್ತುಕೊಂಡು, ಕುತ್ತಿಗೆಗೆ ಕುತ್ತಿಗೆ ಪಟ್ಟಿ ಎಂಬ ನೇಣು ಬಿಗಿದುಕೊಂಡು, ಮನೆಗೆಲಸ (ಹೋಮ್ ವರ್ಕ್) ಮಾಡುವುದಕ್ಕಾಗಿ ದೇವರು ಕೊಟ್ಟ ಎರಡು ಕಣ್ಣು ಸಾಲದೆ ಮತ್ತೆರಡು ಕಣ್ಣುಗಳನ್ನು ಹಾಕಿಕೊಂಡು, ಮನೆಗೆಲಸದ ಭೂತ ಆವರಿಸಿದವರಂತೆ ಆಂಗ್ಲ ಮಾಧ್ಯಮ ಶಾಲಾ ತರಗತಿಗಳಿಂದ ಹೊರಗೋಡಿ ಬರುತ್ತಿರುವ ಹುಡುಗರನ್ನು ನೋಡಿದರೆ ಅಯ್ಯೋ ಎನಿಸುತ್ತದೆ.ಪೋಷಕರ ಒಣ ಪ್ರತಿಷ್ಠೆ ಕಾಯ್ದುಕೊಳ್ಳಲು ಈ ಮಕ್ಕಳಿಗೆ ಅನಿಯಮಿತ ಅವಧಿಯ ಕಠಿಣ ಸಜೆ.