ನಾಗರಾಜ್ ಭೂತನಹೊಸೂರು NRB ಕನ್ನಡ ರಾಜ್ಯೋತ್ಸವ ದಿನ ಮತ್ತೆ ಬಂದಿದೆ. ನವೆಂಬರ್ ಕನ್ನಡಿಗರು ಈಗಾಗಲೇ ಜಾಗೃತರಾಗಿದ್ದಾರೆ. ಮತ್ತೊಂದು ಕಡೆ ಕನ್ನಡದ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ ಮಂದಿ ಬೀದಿಬೀದಿಯಲ್ಲಿ ಕೆಂಪು-ಹಳದಿ ಬಣ್ಣದ ಬಾವುಟ-ಬಂಟಿಂಗ್ಸ್ಗಳನ್ನು ಕಟ್ಟಿ ಕನ್ನಡಕ್ಕೆ ಜೈ, ಕನ್ನಡಕ್ಕೆ ಕೈ ಎತ್ತು ಇತ್ಯಾದಿ ಘೋಷಣೆಗಳನ್ನು ಕೂಗಿ ಮೋಟರ್ ಬೈಕಿನ ಮೇಲೆ ದೊಡ್ಡ ಬಾವುಟಗಳನ್ನು ಹಿಡಿದು ಅತೀವ ಕನ್ನಡ ಪ್ರೇಮವನ್ನು ಸಾರಲು ಸಜ್ಜಾಗಿದ್ದಾರೆ.ಕೆಲವು ವರ್ಷಗಳ ಹಿಂದೆ ಕನ್ನಡಿಗರು ತಮ್ಮನ್ನು ತಾವು ಕನ್ನಡಿಗ/ಕನ್ನಡತಿ